ADVERTISEMENT

ಚಾಕಲೆಟ್‌ ಕೊಡಿಸುವುದಾಗಿ ಪುಸಲಾಯಿತಿ ಬಾಲಕಿಗೆ ಲೈಂಗಿಕ ಕಿರುಕುಳ: ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 4:12 IST
Last Updated 13 ಆಗಸ್ಟ್ 2025, 4:12 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೀರೂರು(ಕಡೂರು): ಚಾಕಲೆಟ್‌ ಕೊಡಿಸುವುದಾಗಿ ಪುಸಲಾಯಿತಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಆದಿಲ್‌ ಬಾಷಾ ಎಂಬಾತನನ್ನು ಬಂಧಿಸಿರುವ ಬೀರೂರು ಪೊಲೀಸರು ಆತನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಬಾಲಕಿಯು ಸಂಬಂಧಿ ಬಾಲಕನೊಂದಿಗೆ ಮನೆಯ ಸಮೀಪ ಸೈಕಲ್ ಸವಾರಿ ನಡೆಸುತ್ತಿದ್ದಾಗ ಬೈಕ್‌ನಲ್ಲಿ ಬಂದ ಆರೋಪಿಯು, ರೇಸ್‌ನಲ್ಲಿ ಗೆದ್ದವರಿಗೆ ಚಾಕಲೆಟ್‌ ಕೊಡಿಸುವ ಆಮಿಷ ಒಡ್ಡಿದ್ದ. ಬಳಿಕ ಬಾಲಕಿಯನ್ನು ಪುಸಲಾಯಿಸಿ ಬೈಕ್‌ನಲ್ಲಿ ಹತ್ತಿಸಿಕೊಂಡು ಬಡಾವಣೆಯ ಒಂದು ಭಾಗದಲ್ಲಿರುವ ಹಾಳಾಗಿರುವ ಮನೆ ಬಳಿ ಕರೆದುಕೊಂಡು ಹೋಗಿದ್ದಾನೆ. ಬಾಲಕ ವಾಪಸ್ ಬಂದು ಮನೆಯವರಿಗೆ ಮಾಹಿತಿ ನೀಡಿದ್ದು, ಹುಡುಕಾಟ ನಡೆಸುವಷ್ಟರಲ್ಲಿ ಬಾಲಕಿ ಮನೆಗೆ ಬಂದಿದ್ದಾಳೆ.

‘ಕತ್ತಲಿದ್ದಲ್ಲಿ ಕರೆದುಕೊಂಡು ಹೋಗಿ ನನಗೆ ಕಿರುಕುಳ ನೀಡಿದ್ದು, ತಪ್ಪಿಸಿಕೊಂಡು ಬಂದೆ’ ಎಂದು ಬಾಲಕಿ ತಿಳಿಸಿದ್ದಳು. ಅದೇ ಸಮಯದಲ್ಲಿ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದ ಆರೋಪಿಯನ್ನು ಅಜ್ಜಂಪುರ ರಸ್ತೆಯಲ್ಲಿ ಜನ ಥಳಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಠಾಣೆಗೆ ಕರೆದೊಯ್ದರು. ಪೊಲೀಸ್ ಠಾಣೆಯ ಬಳಿಯೂ ಗುಂಪುಗೂಡಿದ ಜನ ಆರೋಪಿಯನ್ನು ತೋರಿಸುವಂತೆ ಒತ್ತಾಯಿಸಿ, ಆತನ ವಿರುದ್ಧ ಪ್ರಕರಣ ದಾಖಲಿಸುವವರೆಗೆ ಇಲ್ಲಿಂದ ತೆರಳುವುದಿಲ್ಲ ಎಂದು ಪಟ್ಟುಹಿಡಿದರು.

ತರೀಕೆರೆ ಡಿವೈಎಸ್‌ಪಿ ಹಾಲಮೂರ್ತಿರಾವ್ ಠಾಣೆಗೆ ಬಂದು ದೂರು ನೀಡುವಂತೆ ಪೋಷಕರಿಗೆ ತಿಳಿಸಿದರು. ಬಾಲಕಿಯ ತಾಯಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದ್ದು, ಎಫ್‌ಐಆರ್ ಪ್ರತಿಯನ್ನು ಪೊಲೀಸರು ತೋರಿಸಿದ ಬಳಿಕ ಗುಂಪುಗೂಡಿದ್ದ ಜನ ಠಾಣೆ ಬಳಿಯಿಂದ ತೆರಳಿದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.