
ನರಸಿಂಹರಾಜಪುರ: ‘ಭರತ ನಾಟ್ಯವು ಭಾರತದ ಮೂಲ ಕಲೆಯಾಗಿದೆ. ವಿದೇಶಗಳಲ್ಲೂ ಭಾರತದ ಕಲೆಯು ವಿಜೃಂಭಿಸುತ್ತಿದೆ’ ಎಂದು ಅಮ್ಮ ಫೌಂಡೇಷನ್ ಸಂಸ್ಥಾಪಕ ಸುಧಾಕರ ಎಸ್.ಶೆಟ್ಟಿ ಹೇಳಿದರು.
ಪಟ್ಟಣದ ಸಹರಾ ಕನ್ವೆನ್ಶನ್ ಹಾಲ್‌ನಲ್ಲಿ ಗುರುವಾರ ನಡೆದ ರಾಗ ಮಯೂರಿ ಅಕಾಡೆಮಿಯ ಮೊದಲನೇ ವರ್ಷದ ಸಂಗೀತ- ನೃತ್ಯ ಸಂಭ್ರಮ ಸಮಾರಂಭದಲ್ಲಿ ಮಾತನಾಡಿದರು.
ಸಂಗೀತ, ಭರತನಾಟ್ಯ, ಸಂಸ್ಕೃತಿ, ಸಂಸ್ಕಾರಗಳೇ ದೇಶದ ದೊಡ್ಡ ಶಕ್ತಿಗಳಾಗಿವೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಂಗೀತ, ನೃತ್ಯವೂ ಪೂರಕವಾಗುತ್ತದೆ. ಇದು ಸಂಸ್ಕಾರ ಹಾಗೂ ಸಂಸ್ಕೃತಿಯ ಹಬ್ಬವಾಗಿದೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪುತ್ತೂರಿನ ಭರತನಾಟ್ಯ ಕಲಾವಿದ ದೀಪಕ್ ಕುಮಾರ್ ಮಾತನಾಡಿದರು.
ಸಂಗೀತ ನೃತ್ಯ ಅಕಾಡೆಮಿಯ ಸದಸ್ಯೆ ಬಿ.ವಿ.ಗೀತಾ ಉಪನ್ಯಾಸ ನೀಡಿ, ದೇಶದ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾಗಿದೆ. ಭರತನಾಟ್ಯ, ನೃತ್ಯ, ಸಂಗೀತ ಅಕಾಡೆಮಿಗಳಿಂದ ತರಬೇತಿ ಪಡೆದ ಗುರುಗಳಿಂದ ಶಾಸ್ತ್ರೀಯವಾಗಿ ಕಲಿಯಬೇಕು ಎಂದರು.
ರಾಗಮಯೂರಿ ಅಕಾಡೆಮಿಯ ಕಾರ್ಯದರ್ಶಿ ಎಚ್.ಯು.ಪ್ರಜ್ವಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷತೆಯನ್ನು ರಾಗಮಯೂರಿ ಅಕಾಡೆಮಿ ನಿರ್ದೇಶಕಿ ಅಂಕಿತ ಪ್ರಜ್ವಲ್ ವಹಿಸಿದ್ದರು. ಪುತ್ತೂರಿನ ಭರತನಾಟ್ಯ ಕಲಾವಿದೆ ಪ್ರೀತಿಕಲಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್.ಸದಾಶಿವ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್, ಸಮಾಜ ಸೇವಕಿ ಜುಬೇದ, ಸನ್ಮತಿ ರಕ್ಷಿತ್, ಚಂದ್ರಶೇಖರ್, ಸಾರ್ಥಕ್ ಗೌಡ, ಗಾಂಧಿಗ್ರಾಮ ನಾಗರಾಜ್, ಶಿವದಾಸ್, ಶಿಲ್ಪಕುಮಾರಿ, ಶ್ರುತಿ, ಭವ್ಯ, ಸೌಮ್ಯ ಹಾಜರಿದ್ದರು.
ರಾಗಮಯೂರಿ ಅಕಾಡೆಮಿಯ ಮಕ್ಕಳು ಶ್ರೀಕೃಷ್ಣ ಲೀಲಾ ಎಂಬ ನೃತ್ಯರೂಪಕ ಪ್ರದರ್ಶಿಸಿದರು. ದ್ವಾರಮಕ್ಕಿಯ ಸನ್ಮತಿ ರಕ್ಷಿತ್ ಅವರಿಗೆ ವರ್ಣಾವರಿ ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.