ADVERTISEMENT

‘ಬ್ರೈನ್‌ಬ್ಲೂಮ್‌’ ಸ್ಪರ್ಧೆ: ಹೈವೇ ಶಾಲೆ ವಿದ್ಯಾರ್ಥಿ ಪ್ರಥಮ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 5:51 IST
Last Updated 5 ಫೆಬ್ರುವರಿ 2026, 5:51 IST
ಜಿಲ್ಲಾಮಟ್ಟದ ಬ್ರೈನ್‌ಬ್ಲೂಮ್‌ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹೈವೇ ಶಾಲೆಯ 2ನೇ ತರಗತಿ ವಿದ್ಯಾರ್ಥಿ ನಕುಲ್‌ ಎಸ್‌. ಗೌಡ ಅವರಿಗೆ ಪ್ರಾಂಶುಪಾಲ ಗಣೇಶ್‌ ಸಾಲಿಯಾನ್‌ ಟ್ಯಾಬ್‌ ಬಹುಮಾನ ವಿತರಿಸಿದರು. ಪೋಷಕರಾದ ಸಿದ್ದೇಶ್‌, ಭವ್ಯಾ ಭಾಗವಹಿಸಿದ್ದರು
ಜಿಲ್ಲಾಮಟ್ಟದ ಬ್ರೈನ್‌ಬ್ಲೂಮ್‌ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹೈವೇ ಶಾಲೆಯ 2ನೇ ತರಗತಿ ವಿದ್ಯಾರ್ಥಿ ನಕುಲ್‌ ಎಸ್‌. ಗೌಡ ಅವರಿಗೆ ಪ್ರಾಂಶುಪಾಲ ಗಣೇಶ್‌ ಸಾಲಿಯಾನ್‌ ಟ್ಯಾಬ್‌ ಬಹುಮಾನ ವಿತರಿಸಿದರು. ಪೋಷಕರಾದ ಸಿದ್ದೇಶ್‌, ಭವ್ಯಾ ಭಾಗವಹಿಸಿದ್ದರು   

ಕಡೂರು: ಪಟ್ಟಣದ ಹೈವೇ ಇಂಗ್ಲಿಷ್‌ ಸ್ಕೂಲ್‌ನ 2ನೇ ತರಗತಿ ವಿದ್ಯಾರ್ಥಿ ನಕುಲ್‌ ಎಸ್‌. ಗೌಡ ಜಿಲ್ಲಾಮಟ್ಟದ ‘ಬ್ರೈನ್‌ಬ್ಲೂಮ್‌’ ಸ್ಪರ್ಧೆಯಲ್ಲಿ‌ ಪ್ರಥಮ ಸ್ಥಾನ ಗಳಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ 2024ರಲ್ಲಿ ಸ್ಥಾಪಿತವಾಗಿರುವ ‘ಬ್ರೈನ್‌ಬ್ಲೂಮ್‌’ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆ, ಗಣಿತ, ವಿಜ್ಞಾನ, ಇಂಗ್ಲಿಷ್‌ ಭಾಷಾ ಸಾಮರ್ಥ್ಯ ಪರೀಕ್ಷೆ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸುತ್ತದೆ.

ಮೊದಲು ಶಾಲಾ ಮಟ್ಟದಲ್ಲಿ ನಡೆದ ಸ್ಪರ್ಧೆಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ, 2ನೇ ಹಂತಕ್ಕೆ ಜಿಲ್ಲಾಮಟ್ಟದಲ್ಲಿ ಸ್ಪರ್ಧೆ ನಡೆಸಲಾಗುತ್ತದೆ. ಜ್ಞಾನವಿಕಾಸ, ಕೌಶಲಗಳನ್ನು ಪ್ರೇರೇಪಿಸುವ ಮೂಲಕ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ನೆರವಾಗುವುದು ಇದರ ಉದ್ದೇಶವಾಗಿದೆ. ಮೊದಲ ಸ್ಥಾನ ಗಳಿಸಿದ ಪ್ರತಿ ತಾಲ್ಲೂಕಿನ ಒಬ್ಬ ವಿದ್ಯಾರ್ಥಿಗೆ ಟ್ಯಾಬ್ಲೆಟ್‌, 2ನೇ ಸ್ಥಾನ ಪಡೆದವರಿಗೆ ₹5 ಸಾವಿರ, 3ನೇ ಸ್ಥಾನಕ್ಕೆ ₹4 ಸಾವಿರ, 4ನೇ ಸ್ಥಾನಕ್ಕೆ ₹3 ಸಾವಿರ ಮತ್ತು 5ನೇ ಸ್ಥಾನ ಪಡೆದವರಿಗೆ ₹2 ಸಾವಿರ ನಗದು ಬಹುಮಾನ ನೀಡಲಾಗುತ್ತದೆ.

ADVERTISEMENT

ಕಳೆದ ಡಿಸೆಂಬರ್‌ ತಿಂಗಳಿನಲ್ಲಿ ಜಿಲ್ಲಾಮಟ್ಟದ ಸ್ಪರ್ಧೆ ನಡೆದಿತ್ತು. ನಮ್ಮ ಶಾಲೆಯ ನಕುಲ್‌ ಎಸ್‌. ಗೌಡ ಸಾಮಾನ್ಯಜ್ಞಾನ ರಸಪ್ರಶ್ನೆ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಟ್ಯಾಬ್‌ ಬಹುಮಾನ ಪಡೆದು, ಶಾಲೆಗೆ ಹೆಮ್ಮೆ ತಂದಿದ್ದಾರೆ. 4ನೇ ತರಗತಿ ವಿದ್ಯಾರ್ಥಿ ಶಿವಸಾಲಿ ಸೃಜನ್‌ 2ನೇ ಸ್ಥಾನದೊಂದಿಗೆ ₹5 ಸಾವಿರ ಹಾಗೂ 10ನೇ ತರಗತಿ ವಿದ್ಯಾರ್ಥಿನಿ ಪಲ್ಲವಿ ಎ.ಸಿ. 5ನೇ ಸ್ಥಾನದೊಂದಿಗೆ ₹2 ಸಾವಿರ ನಗದು ಬಹುಮಾನ ಪಡೆದಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲ ಗಣೇಶ್‌ ಸಾಲಿಯಾನ್‌ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.