ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ ಮುಂದುವರಿದಿದ್ದು, ಹಲವೆಡೆ ರಸ್ತೆಗೆ ಅಡ್ಡಲಾಗಿ ಮರಗಳು ಉರಳಿವೆ.
ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿಗೆ ತೆರಳುವ ಮಾರ್ಗದಲ್ಲಿ ಕೈಮರದಿಂದ 4 ಕಿಲೋ ಮೀಟರ್ ದೂರದಲ್ಲಿ ದೊಡ್ಡ ಮರವೊಂದು ಬಿದ್ದಿದೆ. ಇದರಿಂದ ಮುಳ್ಳಯ್ಯನಗಿರಿ, ಅತ್ತಿಗುಂಡಿ, ಬಾಬಾಬುಡನ್‌ಗಿರಿ, ಗಾಳಿಕೆರೆ, ಮಹಲ್ ಸೇರಿ ಹಲವೆಡೆಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಕೊಪ್ಪ ತಾಲ್ಲೂಕಿನ ಮೇಗೂರು ಬಳಿ ಮರವೊಂದು ಬೇರು ಸಹಿತ ರಸ್ತೆಗೆ ಉರಳಿದೆ. ವೆಂಕಟರಮಣ ದೇವಸ್ಥಾನದ ಕೆಳ ಭಾಗದಲ್ಲಿರುವ ಕೊಗ್ರೆ ರಸ್ತೆಯ ಮೇಲೆ ಮರ ಬಿದ್ದಿದ್ದು, ಮೇಗೂರು ಭಾಗದಿಂದ ಕೊಗ್ರೆ, ಶೃಂಗೇರಿಗೆ ಸಂಪರ್ಕ ಕಡಿತವಾಗಿದೆ. ಎರಡೂ ಕಡೆ ವಿದ್ಯುತ್ ಕಂಬಗಳ ಮೇಲೆಯೇ ಮರಗಳು ಉರುಳಿದ್ದು, ಸುತ್ತಮುತ್ತಲ ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.