ಆಲ್ದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಬಿಟ್ಟುಬಿಡದಂತೆ ಕಾಡುತ್ತಿದ್ದು, ಬೆಳೆಗಾರರು ಹೈರಾಣಾಗಿ ಹೋಗಿದ್ದಾರೆ.
ಕಾಡಾನೆ ಬಸರವಳ್ಳಿ, ಐದಳ್ಳಿ, ಆಗಳ, ಬನ್ನೂರು, ಹಂಗರವಳ್ಳಿ ,ಹಕ್ಕಿಮಕ್ಕಿ, ಅರೆನೂರು , ದೇವರಹಳ್ಳಿ, ಗ್ರಾಮಗಳ ವ್ಯಾಪ್ತಿಯಲ್ಲಿ ನಿರಂತರ ಸಂಚರಿಸುತ್ತಿದೆ. ಸ್ಥಳೀಯ ಬೆಳೆಗಾರರಾದ ನಾರಾಯಣ ಗೌಡ, ವಿಜಯ ಶಾನುಭೋಗ ಸೇರಿ ಹಲವು ಕಾಫಿ ಬೆಳೆಗಾರರ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿ ಕಾಫಿ, ಅಡಿಕೆ, ಬಾಳೆ, ತೆಂಗು ಮುಂತಾದ ಬೆಳೆಗಳನ್ನು ನಾಶಪಡಿಸಿದೆ.
ಬೆಳೆಗಾರರು ತೋಟಗಳಿಗೆ ತೆರಳಲು, ಕಾರ್ಮಿಕರಿಗೆ ಕೆಲಸ ಮಾಡಲು ಆತಂಕದ ವಾತಾವರಣ ಸೃಷ್ಟಿಯಾಗಿದೆ. ಅರಣ್ಯ ಇಲಾಖೆಯವರು ಆನೆಗಳನ್ನು ಓಡಿಸಿದರೂ ಪುನಃ ಬರುತ್ತಿರುವ ಕಾರಣ ಆನೆಯನ್ನು ಹಿಡಿದು ಸ್ಥಳಾಂತರಿಸುವ ಶಾಶ್ವತ ಕಾರ್ಯಾಚರಣೆ ಮಾಡಬೇಕೆಂದು ರೈತರು, ಜನರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.