
ಚಿಕ್ಕಮಗಳೂರು: ‘ನಗರದಲ್ಲಿ ಸ್ವಚ್ಛತೆ ಕಾಪಾಡಲು ಒಂದು ವಾರಗಳ ಅವಕಾಶ ನೀಡಲಾಗಿದೆ. ನಂತರ ಎಲ್ಲಿಯೇ ಕಸ ಕಂಡರೂ ಆ ಭಾಗದ ಆಹಾರ ನಿರೀಕ್ಷರನ್ನು ಅಮಾನತು ಮಾಡುವ ಎಚ್ಚರಿಕೆ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು.
‘ಹಲವೆಡೆ ಕಸ ಬಿದ್ದಿರುವುದನ್ನು ನಾನೇ ಮೊಬೈಲ್ ಫೋನ್‌ನಲ್ಲಿ ಫೋಟೊ ತೆಗೆದು ನಗರಸಭೆ ಆಯುಕ್ತರಿಗೆ ಕಳಿಸಿದ್ದೇನೆ. ಚಿಕ್ಕ ನಗರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಗರಸಭೆ ಜವಾಬ್ದಾರಿ. ಅದನ್ನು ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಹೇಳಿದರು.
‘ಜಿಲ್ಲೆಗೆ ಸಾವಿರಾರು ಪ್ರವಾಸಿಗರು ಬರುತ್ತಾರೆ. ಇಂತಹ ಸ್ವಚ್ಛಂದ ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದಿರುವುದು ಸರಿಯಲ್ಲ. ಮನೆ –ಮನೆಯಿಂದ ಸರಿಯಾಗಿ ಕಸ ಸಂಗ್ರಹ ಮಾಡದ ಕಾರಣ ರಸ್ತೆ ಬದಿಗೆ ಜನ ಎಸೆಯುತ್ತಿದ್ದಾರೆ. ಕಸ ಸಂಗ್ರಹ ಕೆಲಸ ಸಮರ್ಪಕವಾಗಿ ಆಗಬೇಕೆಂದು ಆಯುಕ್ತರಿಗೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.