ADVERTISEMENT

ಚಿಕ್ಕಮಗಳೂರು: ಆನೆ ದಾಳಿಗೆ ಎಂಟು ತಿಂಗಳಲ್ಲಿ ಐವರು ಬಲಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 6:17 IST
Last Updated 29 ಜುಲೈ 2025, 6:17 IST
ಆನೆ ದಾಳಿ–ಸಾಂದರ್ಭಿಕ ಚಿತ್ರ
ಆನೆ ದಾಳಿ–ಸಾಂದರ್ಭಿಕ ಚಿತ್ರ   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಎಂಟು ತಿಂಗಳಲ್ಲಿ ಜಿಲ್ಲೆಯಲ್ಲಿ ಐವರು ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ. ಅಷ್ಟೂ ದಾಳಿಗಳು ಎನ್.ಆರ್.ಪುರ ತಾಲ್ಲೂಕಿನಲ್ಲೇ ನಡೆದಿವೆ.

ಎನ್.ಆರ್.ಪುರ ತಾಲ್ಲೂಕಿನ ಸೀತೂರು ಗ್ರಾಮದ ಉಮೇಶ್ (56), 2024ರ ನವೆಂಬರ್ 30ರಂದು ಆನೆ ದಾಳಿಗೆ ಮೃತಪಟ್ಟರು. ಡಿಸೆಂಬರ್ 19ರಂದು ಮಡಬೂರಿನಲ್ಲಿ ಕೆ.ಕೆ.ಎಲಿಯಾಸ್ (72) ಅವರನ್ನು ಕಾಡಾನೆಯೊಂದು ತುಳಿದು ಕೊಂದಿತು.

2025ರಲ್ಲಿ ಫೆಬ್ರವರಿ 8ರಂದು ತಣಿಗೆಗೆಬೈಲು ವ್ಯಾಪ್ತಿಯ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆ ವಿನೋದಾ ಬಾಯಿ(39) ಮೇಲೆ ಆನೆಯ ದಾಳಿ ನಡೆಸಿತ್ತು. ಜುಲೈ 23ರಂದು ಬಾಳೆಹೊನ್ನೂರು ಬಳಿಯ ಬನ್ನೂರಿನ ಬಳಿ ಅನಿತಾ (25) ಆನೆ ದಾಳಿಯಿಂದ ಸಾವನ್ನಪ್ಪಿದ್ದಾರೆ.

ADVERTISEMENT

ನಾಲ್ಕು ದಿನಗಳ ಅಂತರದಲ್ಲೇ ಹುಯಿಗೆರೆ ಪಂಚಾಯಿತಿನ ಅಂಡವಾನಿ ಬಳಿ ಭಾನುವಾರ ಸಂಜೆ (ಜುಲೈ 27) ಆನೆ ದಾಳಿಗೆ ಸಿಲುಕಿ ಸುಬ್ರಾಯಗೌಡ (63) ಮೃತಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.