ADVERTISEMENT

ಚಿಕ್ಕಮಗಳೂರು| ಎನ್‌ಎಂಸಿ ವೃತ್ತದಲ್ಲಿನ ಮಲ್ನಾಡ್ ಟೈರ್ ಮಳಿಗೆಯಲ್ಲಿ ಅಗ್ನಿ ಅವಘಡ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 4:09 IST
Last Updated 1 ಜೂನ್ 2020, 4:09 IST
ಅಗ್ನಿಶಾಮಕ ದಳ ಬೆಂಕಿ ನಂದಿಸುತ್ತಿರುವುದು
ಅಗ್ನಿಶಾಮಕ ದಳ ಬೆಂಕಿ ನಂದಿಸುತ್ತಿರುವುದು   

ಚಿಕ್ಕಮಗಳೂರು:ನಗರದ ಐಜಿ ರಸ್ತೆಯ ಎನ್ಎಂಸಿ ವೃತ್ತದಲ್ಲಿನ ಮಲ್ನಾಡ್ ಟೈರ್ಸ್ ಮಳಿಗೆಯಲ್ಲಿ ನಸುಕಿನಲ್ಲಿ ಬೆಂಕಿ ಹೊತ್ತಿಕೊಂಡು, ಮಳಿಗೆಯಲ್ಲಿದ್ದ ವಸ್ತುಗಳು ಸುಟ್ಟಿವೆ.

ನಾಲ್ಕು ಅಂತಸ್ತಿನ ಈ ಕಟ್ಟಡದ ಮುಂಭಾಗದ ಮಳಿಗೆಗಳಲ್ಲಿದ್ದ ವಸ್ತುಗಳು ಬಹುತೇಕ ನಾಶವಾಗಿವೆ. ಟೈರು, ಟ್ಯೂಬು, ಪೀಠೋಪಕರಣ, ಇತರ ಸಾಮಾನುಗಳು ಸುಟ್ಟು ಕರಕಲಾಗಿವೆ.ಅಗ್ನಿಶಾಮಕ ಸಿಬ್ಬಂದಿ ಬೆಳಿಗ್ಗೆ 5ಗಂಟೆಯಿಂದ ಸತತ ಮೂರು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

ಈ ಕಟ್ಟಡದ ಮೂರನೇ ಹಂತಸ್ತಿನಲ್ಲಿ ಐಸಿಐಸಿಐ ವಿಮಾ ಕಚೇರಿ ಇದ್ದು, ಕಚೇರಿಯ ಕೆಲ ವಸ್ತುಗಳು ಸುಟ್ಟಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.