
ಚಿಕ್ಕಮಗಳೂರು: ರಾಣಾ ಸ್ಪೋರ್ಟ್ಸ್ ಕ್ಲಬ್ ಚಿಕ್ಕಮಗಳೂರು ವತಿಯಿಂದ ಗೌರಮ್ಮ ಬಸವಗೌಡರ ಸ್ಮರಣಾರ್ಥ 8ನೇ ಆವೃತ್ತಿಯ ಚಿಕ್ಕಮಗಳೂರು ಪ್ರೀಮಿಯರ್ ಲೀಗ್ (ಸಿಪಿಎಲ್) ವೈಟ್ ಲೆದರ್‌ಬಾಲ್ ಕ್ರಿಕೆಟ್ ಟೂರ್ನಿ ನ.24ರಿಂದ 30ರವರೆಗೆ ನಗರದ ಸುಭಾಷ್‌ಚಂದ್ರ ಬೋಸ್ ಆಟದ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಿಪಿಎಲ್ ಆಯೋಜಕ ನಟರಾಜ್ ತಿಳಿಸಿದರು.
ಕಳೆದ ಏಳು ಆವೃತ್ತಿಗಳು ಯಶಸ್ವಿಯಾಗಿ ನಡೆದುಕೊಂಡು ಬಂದಿವೆ. ಶಿವಮೊಗ್ಗ ವಲಯದಲ್ಲಿ ಬರುವ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮೂರು ಜಿಲ್ಲೆಗಳ ಆಟಗಾರರು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಾರೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಟೂರ್ನಿಯಲ್ಲಿ ಐದು ತಂಡಗಳಿದ್ದು, ತಂಡಗಳ ಮಾಲೀಕರು ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನ.24ರಂದು ಉದ್ಘಾಟನೆ ನಡೆಯಲಿದ್ದು, ನ.30 ರಂದು ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಪಂದ್ಯದಲ್ಲಿ ಸನ್ನಿ ಬಾಯ್ಸ್, ರೈಸಿಂಗ್ ಸ್ಟಾರ್ಸ್, ಹೊಯ್ಸಳ ಟೈಗರ್ಸ್, ಮಾಸ್ಟರ್ ಬ್ಲಿಸ್, ಮಲ್ನಾಡು ಗ್ಲಾಡಿಯೇಟರ್ಸ್ ತಂಡಗಳು ಭಾಗವಹಿಸಲಿವೆ. ಪ್ರಥಮ ಬಹುಮಾನ ₹1.50 ಲಕ್ಷ ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ₹75 ಸಾವಿರ ಹಾಗೂ ಟ್ರೋಫಿ ನೀಡಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚಿಕ್ಕಮಗಳೂರು ಪ್ರೀಮಿಯರ್ ಲೀಗ್‌ನ ಅಧ್ಯಕ್ಷ ರಿನೇಶ್ ಕುಮಾರ್, ಸದಸ್ಯರಾದ ಹರೀಶ್, ಅಭಿಷೇಕ್, ಸಚ್ಚಿದಾನಂದ್, ನವೀನ್ ಭಟ್, ಗಣೇಶ್, ಸಂತೋಷ್, ಪ್ರಕಾಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.