ಚಿಕ್ಕಮಗಳೂರು: ಮಲೆನಾಡಿನಲ್ಲಿ ನಾಲ್ಕೈದು ದಿನ ಅಬ್ಬರಿಸಿದ್ದ ಮಳೆ ಮಂಗಳವಾರ ಕೊಂಚ ಕಡಿಮೆಯಾಗಿದೆ.
ನಗರ ಮತ್ತು ಸುತ್ತಮುತ್ತ ಮೋಡ ಕವಿದ ವಾತಾವರಣ ಮುಂದುವರಿದಿತ್ತು. ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸುತ್ತಮುತ್ತ ಬೆಳಿಗ್ಗೆ 11 ಗಂಟೆ ತನಕ ನಿರಂತರವಾಗಿ ಮಳೆ ಸುರಿಯಿತು. ಬಳಿಕ ಬಿಡುವು ನೀಡಿತು. ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿಯಲ್ಲಿ ದಟ್ಟ ಮಂಜಿನ ನಡುವೆ ಆಗಾಗ ಮಳೆ ಸುರಿಯಿತು. ಉಳಿದೆಡೆ ಬಿಡುವಿನ ನಡುವೆ ಆಗೊಮ್ಮೆ ಈಗೊಮ್ಮೆ ಮಳೆಯ ಸಿಂಚನವಾಯಿತು.
ಜಿಲ್ಲೆಯಾದ್ಯಂತ ಮಳೆಯಿಂದ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಮಳೆ ಬಿಡುವು ನೀಡಿ ಬಿಸಿಲು ಬಂದರೆ ತೇವಾಂಶ ಕಡಿಮೆಯಾಗಲಿದ್ದು, ಬಳಿಕ ಬಿತ್ತನೆ ಸೇರಿ ಇನ್ನಿತರ ಕೃಷಿ ಚಟುವಟಿಕೆ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.