
ಪ್ರಜಾವಾಣಿ ವಾರ್ತೆ
ಕೊಪ್ಪ: ಪಟ್ಟಣ ಒಳಗೊಂಡಂತೆ ತಾಲ್ಲೂಕಿನ ಹಲವೆಡೆ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ತುಂತುರು ಮಳೆಯಾಗಿದೆ.
ಮೋಡ ಕವಿದ ವಾತಾವರಣ ಇದ್ದು, ಮಂಗಳವಾರ ಮಧ್ಯಾಹ್ನ 4 ಗಂಟೆ ಹೊತ್ತಿಗೆ ಮಳೆ ಆರಂಭಗೊಂಡು 20 ನಿಮಿಷ ಸಣ್ಣದಾಗಿ ಸುರಿಯಿತು.
ಅನಿರೀಕ್ಷಿತವಾಗಿ ಸುರಿದ ಮಳೆಗೆ ಪಟ್ಟಣದಲ್ಲಿ ಜನರು ತಲೆಮೇಲೆ ಕರವಸ್ತ್ರ ಹಾಕಿಕೊಂಡು ಅತ್ತಿಂದಿತ್ತ ಓಡಾಡಿದ ದೃಶ್ಯ ಕಂಡು ಬಂತು. ಶಾಲಾ ಮಕ್ಕಳು ಮಳೆಯಲ್ಲಿಯೇ ನಡೆದುಕೊಂಡು ಮನೆ ಕಡೆಗೆ ಹೋದರು. ಮಳೆಯಿಂದಾಗಿ ಅಡಿಕೆ, ಕಾಫಿ ಬೆಳೆಗಾರರಿಗೆ ತೊಂದರೆ ಉಂಟಾಯಿತು. ಭತ್ತ ಕಟಾವು ಮಾಡಿ, ಒಕ್ಕಲಾಟ ಮಾಡದೆ ಇದ್ದ ರೈತರಿಗೆ ಅಕಾಲಿಕ ಮಳೆ ಸಮಸ್ಯೆ ತಂದೊಡ್ಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.