ADVERTISEMENT

ಮೂಡಿಗೆರೆ | ಮಹಿಳಾ ಸಹಕಾರ ಸಂಘ: ಕಟ್ಟಡ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 5:11 IST
Last Updated 15 ಜೂನ್ 2022, 5:11 IST
ಪಟ್ಟಣದ ಲ್ಯಾಂಪ್ಸ್ ರಸ್ತೆಯಲ್ಲಿ ಸೋಮವಾರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಶಾಸಕರಾದ ಎಂ.ಪಿ. ಕುಮಾರಸ್ವಾಮಿ, ಎಂ.ಕೆ. ಪ್ರಾಣೇಶ್ ಚಾಲನೆ ನೀಡಿದರು. ಶಾಂತಲಾ ನಾಗೇಶ್, ಜಿ.ಬಿ. ಧರ್ಮಪಾಲ್, ಕಮಲಾಕ್ಷಿ, ಆಶಾಮೋಹನ್ ಇದ್ದರು.
ಪಟ್ಟಣದ ಲ್ಯಾಂಪ್ಸ್ ರಸ್ತೆಯಲ್ಲಿ ಸೋಮವಾರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಶಾಸಕರಾದ ಎಂ.ಪಿ. ಕುಮಾರಸ್ವಾಮಿ, ಎಂ.ಕೆ. ಪ್ರಾಣೇಶ್ ಚಾಲನೆ ನೀಡಿದರು. ಶಾಂತಲಾ ನಾಗೇಶ್, ಜಿ.ಬಿ. ಧರ್ಮಪಾಲ್, ಕಮಲಾಕ್ಷಿ, ಆಶಾಮೋಹನ್ ಇದ್ದರು.   

ಮೂಡಿಗೆರೆ: ಪಟ್ಟಣದ ಲ್ಯಾಂಪ್ಸ್ ರಸ್ತೆಯಲ್ಲಿ ಸೋಮವಾರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಶಾಸಕರಾದ ಎಂ.ಪಿ. ಕುಮಾರಸ್ವಾಮಿ, ಎಂ.ಕೆ. ಪ್ರಾಣೇಶ್ ಚಾಲನೆ ನೀಡಿದರು.

ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ‘ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಕಟ್ಟಡವು ಶಿಥಿಲವಾಗಿದ್ದು, ಈ ಬಾರಿ ಸರ್ಕಾರದಿಂದ ಅನುದಾನವನ್ನು ನೀಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ದುರಸ್ತಿಗೆ ಬಂದಿರುವ ಎಲ್ಲಾ ರಸ್ತೆಗಳನ್ನೂ ಅಭಿವೃದ್ಧಿ ಪಡಿಸಲಾಗುವುದು. ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು’ ಎಂದರು.

ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಮಾತನಾಡಿದರು. ಸಹಕಾರ ಸಂಘದ ಅಧ್ಯಕ್ಷೆ ಶಾಂತಲಾ ನಾಗೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಬಿ. ಧರ್ಮಪಾಲ್, ಉಪಾಧ್ಯಕ್ಷೆ ಕಮಲಾಕ್ಷಿ, ಸದಸ್ಯ ಆಶಾಮೋಹನ್, ವಿವಿಧ ಸಹಕಾರ ಸಂಘಗಳ ಪದಾಧಿಕಾರಿಗಳಾದ ಹಳಸೆಶಿವಣ್ಣ, ಓ.ಜಿ. ರವಿ, ವಿ.ಕೆ. ಶಿವೇಗೌಡ, ಸರೋಜಸುರೇಂದ್ರ, ಓಂಕಾರ್, ಭಾನುಮತಿ, ಕಮಲಾಕ್ಷಮ್ಮ, ಜೆ.ಎಸ್. ರಘು, ಟಿ.ಎಂ. ಗಜೇಂದ್ರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.