ಚಿಕ್ಕಮಗಳೂರು: ಸಾಲ ಪಾವತಿಸದ ಕಾರಣಕ್ಕೆ ಕೊಪ್ಪದಲ್ಲಿನ ಸಹಕಾರ ಸಾರಿಗೆ ಕಚೇರಿಗೆ ಬೀಗ ಜಡಿಯಲಾಗಿದೆ.
ಸಹಕಾರ ಸಾರಿಗೆ ಸಂಸ್ಥೆಯುಶ್ರೀರಾಮ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಕಂಪನಿಯಿಂದ ಸಾಲ ಪಡೆದಿದ್ದು, ಮರುಪಾವತಿ ಮಾಡಿಲ್ಲ. ಫೈನಾನ್ಸ್ ಕಂಪನಿಯು ಜಿಲ್ಲಾಧಿಕಾರಿ ಕೋರ್ಟ್ನಲ್ಲಿ ದಾವೆ ಹೂಡಿತ್ತು. ಸ್ಥಿರಾಸ್ತಿ ಸುಪರ್ದಿಗೆ ಪಡೆಯಲು ಕೋರ್ಟ್ ಆದೇಶವಾಗಿದೆ.
'ಡಿ.ಸಿ ಕೋರ್ಟ್ ಆದೇಶದಂತೆ ಸಹಕಾರ ಸಾರಿಗೆ ಸಂಸ್ಥೆ ಕಚೇರಿಸುಪರ್ದಿಗೆ ಪಡೆದು ಬೀಗ ಹಾಕಲಾಗಿದೆ. ಶ್ರೀರಾಮ ಸಂಸ್ಥೆಯವರಿಗೆ ಬೀಗ ನೀಡಲಾಗಿದೆ' ಎಂದು ಕೊಪ್ಪ ತಹಶೀಲ್ದಾರ್ ಪರಮೇಶ್'ಪ್ರಜಾವಾಣಿ'ಗೆ ತಿಳಿಸಿದರು.
ಮಲೆನಾಡಿನ ಸಂಪರ್ಕ ಕೊಂಡಿಯಂತಿದ್ದ ಸಹಕಾರ ಸಾರಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಎರಡು ವರ್ಷಗಳಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಸಹಕಾರ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯಮಟ್ಟದಲ್ಲಿ ಹೆಸರು ಗಳಿಸಿದ್ದ ಸಂಸ್ಥೆ ಸಾಲದ ಸುಳಿಗೆ ಸಿಲುಕಿದೆ. ಸಂಸ್ಥೆಯಲ್ಲಿ
250ಕ್ಕೂ ಹೆಚ್ಚು ನೌಕರರು ಇದ್ದು, ಅತಂತ್ರರಾಗಿದ್ದಾರೆ.
ಸಹಕಾರ ಸಾರಿಗೆ ಸಂಸ್ಥೆಯು ಶ್ರೀ ರಾಮ ಟ್ರಾನ್ಸ್ ಪೋರ್ಟ್ ಫೈನಾನ್ಸ್‌ನಿಂದ ₹ 1.20 ಕೋಟಿ ಸಾಲ ಪಡೆದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.