ADVERTISEMENT

ಕೊಟ್ಟಿಗೆಹಾರ: ಚೀನಾದ ವ್ಯಕ್ತಿ ಕಂಡು ಬೆಚ್ಚಿದ ಜನ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 19:40 IST
Last Updated 19 ಮಾರ್ಚ್ 2020, 19:40 IST
ಚೀನಾ ಮೂಲದ ವ್ಯಕ್ತಿಗೆ ಕೊಟ್ಟಿಗೆಹಾರದಲ್ಲಿ ಗೆಳೆಯರ ಬಳಗದ ಕಾರ್ಯದರ್ಶಿ ಅಶೋಕ್ ಮಲ್ಲಂದೂರು ಹಾಗೂ ಇತರರು ಮುಖಗವಸು ಹಾಕಲು ಸೂಚಿಸಿದರು
ಚೀನಾ ಮೂಲದ ವ್ಯಕ್ತಿಗೆ ಕೊಟ್ಟಿಗೆಹಾರದಲ್ಲಿ ಗೆಳೆಯರ ಬಳಗದ ಕಾರ್ಯದರ್ಶಿ ಅಶೋಕ್ ಮಲ್ಲಂದೂರು ಹಾಗೂ ಇತರರು ಮುಖಗವಸು ಹಾಕಲು ಸೂಚಿಸಿದರು   

ಕೊಟ್ಟಿಗೆಹಾರ (ಚಿಕ್ಕಮಗಳೂರು): ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರಕ್ಕೆ ಬುಧವಾರ ಬಂದಿದ್ದ ಚೀನಾದ ಪುಂಜಿಮೊ ಎಂಬಾತನನ್ನು ಕಂಡು ಗ್ರಾಮಸ್ಥರು ಬೆಚ್ಚಿದ್ದಾರೆ. ವಾಸ್ತವ್ಯಕ್ಕೆ ಕೊಠಡಿ ನೀಡಲು ಲಾಡ್ಜ್‌ನವರು ನಿರಾಕರಿಸಿದ್ದು, ಆತ ಪೆಟ್ರೊಲ್‌ ಬಂಕ್‌ ಬಳಿ ಮಲಗಿ ಗುರುವಾರ ಬೆಳಗಿನ ಜಾವ ತೆರಳಿದ್ದಾರೆ. ದೇಶ ಪರ್ಯಟನೆ ಮಾಡುತ್ತಿರುವ ಪುಂಜಿಮೊ ಮಂಗಳೂರಿನಿಂದ ಕೊಟ್ಟಿಗೆಹಾರಕ್ಕೆ ಬೈಕಿನಲ್ಲಿ ಬುಧವಾರ ರಾತ್ರಿ ಬಂದಿದ್ದಾರೆ. ವ್ಯಕ್ತಿ ಚೀನಾದವರು ಎಂದು ಗೊತ್ತಾಗಿ, ವಾಸ್ತವ್ಯಕ್ಕೆ ಕೊಠಡಿ ನೀಡಲು ಲಾಡ್ಜ್‌ನವರು ನಿರಾಕರಿಸಿದ್ದಾರೆ.

ಕೊಟ್ಟಿಗೆಹಾರ ಗೆಳೆಯರ ಬಳಗದ ಕಾರ್ಯದರ್ಶಿ ಅಶೋಕ್‍ ಮಲ್ಲಂದೂರು, ಇತರರು ಆ ವ್ಯಕ್ತಿ ಸಂಪರ್ಕಿಸಿ ಮುಖಗವಸು (ಮಾಸ್ಕ್‌) ಧರಿಸುವಂತೆ ಹೇಳಿದ್ದಾರೆ. ಪೊಲೀಸರು ಪುಂಜಿಮೊ ಅವರನ್ನು ವಿಚಾರಿಸಿದ್ದಾರೆ. ಕೊರೊನಾ ಸೋಂಕು ಇಲ್ಲದಿರುವ ಬಗ್ಗೆ ನೀಡಿರುವ ವೈದ್ಯಕೀಯ ಪ್ರಮಾಣಪತ್ರವನ್ನು ಆಗ ತೋರಿಸಿದ್ದಾರೆ. ವಾಸ್ತವ್ಯಕ್ಕೆ ಲಾಡ್ಜ್‌ನಲ್ಲಿ ಕೊಠಡಿ ದೊರೆಯದಿದ್ದರಿಂದ ಪೇಟೆಯ ಸನಿಹದ ಪೆಟ್ರೋಲ್ ಬಂಕ್‌ ಪಕ್ಕದಲ್ಲಿ ಗುಡಾರ ಛತ್ರಿ ಹಾಕಿಕೊಂಡು ಮಲಗಿದ್ದಾರೆ. ನಸುಕಿನಲ್ಲಿ ಬೈಕಿನಲ್ಲಿ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT