ADVERTISEMENT

ಚಿಕ್ಕಮಗಳೂರು | ಭಾರಿ ಮಳೆ: ನಲುಗಿದ ಮಲೆನಾಡು

​ಪ್ರಜಾವಾಣಿ ವಾರ್ತೆ
Published 25 ಮೇ 2025, 15:42 IST
Last Updated 25 ಮೇ 2025, 15:42 IST
ಚಿಕ್ಕಮಗಳೂರು ನಗರದ ದಂಟರಮಕ್ಕಿ ಬಳಿಯ ಕಡೂರು ರಸ್ತೆಯಲ್ಲಿ ಮಳೆಯ ನಡುವೆ ವಾಹನಗಳು ಸಂಚರಿಸಿದವು
ಚಿಕ್ಕಮಗಳೂರು ನಗರದ ದಂಟರಮಕ್ಕಿ ಬಳಿಯ ಕಡೂರು ರಸ್ತೆಯಲ್ಲಿ ಮಳೆಯ ನಡುವೆ ವಾಹನಗಳು ಸಂಚರಿಸಿದವು   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಮತ್ತಷ್ಟು ಬಿರುಸು ಪಡೆದುಕೊಂಡಿದ್ದು, ಎಡಬಿಡದೆ ಸುರಿಯುತ್ತಿದೆ. ಮಳೆ–ಗಾಳಿಯ ನಡುವೆ ಹಳ್ಳ- ಕೊಳ್ಳಗಳು ಉಕ್ಕಿ ಹರಿಯುತ್ತಿವೆ.

ಕಳಸ, ಕೊಪ್ಪ, ಬಾಳೆಹೊನ್ನೂರು, ಆಲ್ದೂರು, ಶೃಂಗೇರಿ, ಕೊಟ್ಟಿಗೆಹಾರ, ಬಣಕಲ್, ಎನ್.ಆರ್.ಪುರ, ಚಿಕ್ಕಮಗಳೂರು ನಗರ, ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಅತ್ತಿಗುಂಡಿ, ಬಾಬಾಬುಡನ್‌ಗಿರಿ ಸೇರಿ ಎಲ್ಲೆಡೆ ಮಳೆ ಆರ್ಭಟ ಮುಂದುವರಿದಿದೆ. ದಿನವಿಡಿ ಬಿಟ್ಟು ಬಿಡದೆ ಸುರಿದ ಮಳೆಯ ನಡುವೆ ಮನೆಯಿಂದ ಹೊರಬರಲು ಸಾಧ್ಯವಾಗದೆ ಜನ ಪರದಾಡಿದರು. ಹಲವು ಮನೆಗಳ ಮೇಲೆ ಮರಗಳು ಉರುಳಿವೆ. ವಿದ್ಯುತ್ ಕಂಬಗಳೂ ನೆಲಕಚ್ಚಿವೆ.

ಬಾಬಾಬುಡನ್‌ಗಿರಿ ರಸ್ತೆಯ ಕವಿಕಲ್ ಗಂಡಿ ಬಳಿ ಮಣ್ಣು ಜರಿದಿದ್ದು, ಆತಂಕ ಮನೆ ಮಾಡಿದೆ. ಹೆಚ್ಚು ಕುಸಿಯದಂತೆ ಸುರಕ್ಷತಾ ಕ್ರಮಗಳನ್ನು ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಕೈಗೊಂಡಿದ್ದು, ಮರಳು ಮೂಟೆಗಳನ್ನು ಜೋಡಿಸಿದ್ದಾರೆ.

ADVERTISEMENT

ಮಳೆಯಿಂದ ಚಾರ್ಮಾಡಿ ಘಾಟಿಯಲ್ಲಿ ಮಂಜು ಮುಸುಕಿದ ವಾತಾವರಣ ಇತ್ತು. ವಾಹನ ಚಾಲನೆಗೆ ಸವಾರರು ಪರದಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.