ADVERTISEMENT

ಕಾಫಿನಾಡಿಗೆ ಪ್ರವಾಸಿಗರು ಬರದಂತೆ ಡಿ.ಸಿ ಮನವಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 20:34 IST
Last Updated 16 ಮಾರ್ಚ್ 2020, 20:34 IST
ಡಾ.ಬಗಾದಿ ಗೌತಮ್‌
ಡಾ.ಬಗಾದಿ ಗೌತಮ್‌   

ಚಿಕ್ಕಮಗಳೂರು: ‘ಕೊರೊನಾ ವೈರಸ್‌ ಎಲ್ಲೆಡೆ ತಲ್ಲಣ ಸೃಷ್ಟಿಸಿದ್ದು, ಹೊರ ದೇಶ, ಹೊರ ರಾಜ್ಯ, ಹೊರ ಜಿಲ್ಲೆಗಳ ಪ್ರವಾಸಿಗರು ಸ್ವಯಂಪ್ರೇರಿತವಾಗಿ ಕಾಫಿನಾಡಿಗೆ ಪ್ರವಾಸಕ್ಕೆ ಬರಬಾರದು’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಮನವಿ ಮಾಡಿದರು.

‘ಜಿಲ್ಲೆಯ ಜನರ ಹಿತದೃಷ್ಟಿಯಿಂದ ಏಪ್ರಿಲ್ 15ರ ವರೆಗೆ ಇಲ್ಲಿನ ಪ್ರವಾಸಿ ತಾಣಗಳಿಗೆ (ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ, ಕೆಮ್ಮಣ್ಣುಗುಂಡಿ, ಶೃಂಗೇರಿ...) ಪ್ರವಾಸಿಗರು ಬರಬಾರದು. ಸೋಂಕು ತಡೆಗಟ್ಟಲು ಈ ಸಲಹೆಯನ್ನು ಪರಿಗಣಿಸಬೇಕು. ಇದು ನಮ್ಮ ಕೋರಿಕೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಭದ್ರಾ ವನ್ಯಜೀವಿ ವಲಯದಲ್ಲೂ ಸಫಾರಿ, ಮೊದಲಾದವನ್ನು ತಾತ್ಕಾಲಿಕವಾಗಿ ಬಂದ್‌ ಮಾಡುವಂತೆ ಉಪ ಅರಣ್ಯಸಂರಕ್ಷಣಾಧಿಕಾರಿಗೆ ಸೂಚಿಸಲಾಗುವುದು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.