ADVERTISEMENT

ಚಿಕ್ಕಮಗಳೂರು | 10 ಮಂದಿಯಲ್ಲಿ ಸೋಂಕು ಪತ್ತೆ

ಕಾಫಿನಾಡು: ಸಕ್ರಿಯ ಪ್ರಕರಣ ಸಂಖ್ಯೆ 43ಕ್ಕೆ ಏರಿಕೆ– ಒಟ್ಟು ಪ್ರಕರಣ 78

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 16:27 IST
Last Updated 30 ಜೂನ್ 2020, 16:27 IST

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಂಗಳವಾರ ಎರಡು ವರ್ಷದ ಮಗು ಸಹಿತ 10 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ, ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 43ಕ್ಕೆ ಏರಿದೆ.

ಕೋವಿಡ್‌ ದೃಢಪಟ್ಟಿದ್ದವರ ಸಂಪರ್ಕದಲ್ಲಿದ್ದ ಐವರಿಗೆ, ಶೀತಜ್ವರ ಗುಣ ಲಕ್ಷಣ ಇದ್ದ ಒಬ್ಬರಿಗೆ, ಹೊರರಾಜ್ಯದಿಂದ ಬಂದಿರುವ ಮೂವರು ಮತ್ತು ವಿದೇಶದಿಂದ ಬಂದಿರುವ ಒಬ್ಬರಿಗೆ ಸೋಂಕು ಪತ್ತೆಯಾಗಿದೆ.ಚಿಕ್ಕಮಗಳೂರು ತಾಲ್ಲೂಕಿನ ಬೂದನಿಕೆ ಗ್ರಾಮದ 32 ವರ್ಷದ ಪುರುಷ (ಪಿ–9035) ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ತರೀಕೆರೆ ತಾಲ್ಲೂಕಿನ 31 ವರ್ಷದ ಪುರುಷ (ಪಿ–14365), 50 ವರ್ಷದ ಮಹಿಳೆ(ಪಿ–14366) , 55 ವರ್ಷದ ಮಹಿಳೆ (ಪಿ–14373), 39 ವರ್ಷದ ಪುರುಷ (ಪಿ–14372), ಅಜ್ಜಂಫುರ ತಾಲ್ಲೂಕಿನ 76 ವರ್ಷದ ಪುರುಷ (ಪಿ–14367) , 60 ವರ್ಷದ ಪುರುಷ (ಪಿ–14368), ತಮಿಳುನಾಡಿನಿಂದ ಚಿಕ್ಕಮಗಳೂರಿಗೆ ಬಂದಿರುವ 6 ವರ್ಷದ ಬಾಲಕಿ (ಪಿ–14369), 26 ವರ್ಷದ ಮಹಿಳೆ (ಪಿ–14370), 37 ವರ್ಷದ ಪುರುಷ (ಪಿ–14371) ಹಾಗೂ ವಿದೇಶದಿಂದ ಮೂಡಿಗೆರೆ ತಾಲ್ಲೂಕಿಗೆ ಬಂದಿರುವ ಎರಡು ವರ್ಷದ ಹೆಣ್ಣು ಮಗುವಿಗೆ (ಪಿ–14374) ಸೋಂಕು ಪತ್ತೆಯಾಗಿದೆ. ಎಲ್ಲರನ್ನೂ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

533 ಮಾದರಿ ಪರೀಕ್ಷೆಗೆ ರವಾನೆ: ಕೊರೊನಾ ವೈರಾಣು ಸೋಂಕು ಪತ್ತೆ ನಿಟ್ಟಿನಲ್ಲಿ 533 ಮಂದಿಯ ಗಂಟಲಿನ ದ್ರವ ಮತ್ತು ಮೂಗಿನ ದ್ರವ ಮಾದರಿಯನ್ನು ಮಂಗಳವಾರ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

248 ಮಾದರಿ ಪರೀಕ್ಷೆ ವರದಿ ಬಂದಿದ್ದು, ಸೋಂಕು ದೃಢಪಟ್ಟಿಲ್ಲ. 878 ಮಂದಿಯ ವರದಿ ಬರಬೇಕಿದೆ. 532 ಮಂದಿಯನ್ನು ಪ್ರತ್ಯೇಕ ನಿಗಾ ವಾರ್ಡ್‌ಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್‌.ಕೆ.ಮಂಜುನಾಥ್‌ ತಿಳಿಸಿದ್ದಾರೆ.

**
ಚಿಕ್ಕಮಗಳೂರು ಕೊವಿಡ್‌–19 ಪ್ರಕರಣ ಅಂಕಿಅಂಶ
ಆರೋಗ್ಯ ತಪಾಸಣೆ:
533
ಹೋಂ ಕ್ವಾರಂಟೈನ್‌ ಇರುವವರು: 239
ಗುಣಮುಖ ಆದವರು: 34
ಮೃತಪಟ್ಟವರು: 01
ಹೋಂ ಕ್ವಾರಂಟೈನ್‌ ಪೂರ್ಣ:260
ಪರೀಕ್ಷೆಗೆ ಕಳಿಸಿದ ಮಾದರಿ: 7241

ವರದಿ ಪಾಸಿಟಿವ್‌: 78

ವರದಿ ನೆಗೆಟಿವ್‌: 6363

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.