ADVERTISEMENT

ಚಿಕ್ಕಮಗಳೂರಿನಲ್ಲಿ 9 ಮಂದಿಗೆ ಕೋವಿಡ್‌ ಪತ್ತೆ

ರಾಮೇದೇವರಹಳ್ಳಿ: ಒಂದೇ ಕುಟುಂಬದ ನಾಲ್ವರಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 15:53 IST
Last Updated 5 ಜುಲೈ 2020, 15:53 IST

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಭಾನುವಾರ ಒಂಬತ್ತು ಮಂದಿಗೆ ಕೋವಿಡ್‌ ದೃಢಪಟ್ಟಿದೆ. ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 46ಕ್ಕೆ ಏರಿದೆ.

ಬೆಂಗಳೂರಿನಿಂದ ಸ್ವಗ್ರಾಮ ತಾಲ್ಲೂಕಿನ ರಾಮೇದೇವರಹಳ್ಳಿಗೆ ಬಂದಿದ್ದ ಪೊಲೀಸರೊಬ್ಬರ (ಪ್ರಾಥಮಿಕ ಸಂಪರ್ಕ) ಕುಟುಂಬದ ನಾಲ್ವರಿಗೆ ಸೋಂಕು ಪತ್ತೆಯಾಗಿದೆ. 44 ವರ್ಷದ ಮಹಿಳೆ (ಪಿ–21600), 11 ವರ್ಷದ ಬಾಲಕಿ (ಪಿ–21599), 19 ವರ್ಷದ ಪುರುಷ (ಪಿ–21601), 21 ವರ್ಷದ ಮಹಿಳೆ (ಪಿ–21602), ನಗರದ ಶಂಕರಪುರದ 62 ವರ್ಷದ ಪುರುಷ (ಪಿ–21603), ದೋಣಿಕಣದ 20 ವರ್ಷದ ಪುರುಷ (ಪಿ–21604), ಗೌರಿಕಾಲುವೆಯ 46 ವರ್ಷದ ಪುರುಷ ((ಪಿ–21605), ಬಾರ್‌ಲೇನ್‌ನ 69 ವರ್ಷದ ಪುರುಷ (ಪಿ–21606) ಹಾಗೂ ಕೆಆರ್‌ಪೇಟೆ ಬಳಿಯ ಹಲಸುಮನೆಯ 46 ವರ್ಷದ ಪುರುಷಗೆ (ಪಿ–21607) ಸೋಂಕು ಪತ್ತೆಯಾಗಿದೆ. ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈಗಾಗಲೇ ಸೋಂಕಿತರಿದ್ದ ಪ್ರದೇಶಗಳನ್ನು ನಿರ್ಬಂಧಿತ (ಕಂಟೈನ್ಮೆಂಟ್‌) ವಲಯವಾಗಿ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟಾರೆ 92 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ.

ADVERTISEMENT

128 ಮಂದಿ ಗಂಟಲು ದ್ರವ ಪರೀಕ್ಷೆಗೆ ರವಾನೆ: ಕೊರೊನಾ ವೈರಾಣು ಸೋಂಕು ಪತ್ತೆ ನಿಟ್ಟಿನಲ್ಲಿ 128 ಮಂದಿಯ ಗಂಟಲು ಮತ್ತು ಮೂಗಿನ ದ್ರವ ಮಾದರಿಯನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಭಾನುವಾರ ರವಾನಿಸಲಾಗಿದೆ.

16 ಮಂದಿಯ ಗಂಟಲ ದ್ರವ ಮತ್ತು ಮೂಗಿನ ದ್ರವ ಮಾದರಿ ಪರೀಕ್ಷೆ ವರದಿ ಬಂದಿದ್ದು, ಸೋಂಕು ಪತ್ತೆಯಾಗಿಲ್ಲ. 2210 ಮಂದಿಯ ಮಾದರಿ ಪರೀಕ್ಷೆ ವರದಿ ಬರಬೇಕಿದೆ. 126 ಮಂದಿಯನ್ನು ಪ್ರತ್ಯೇಕ ನಿಗಾ ವಾರ್ಡ್‌ಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್‌.ಕೆ.ಮಂಜುನಾಥ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.