ADVERTISEMENT

ಹಾಂದಿ: ಗುಂಡಿಗೆ ಬಿದ್ದಿದ್ದ ಹಸುವಿನ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 12 ಮೇ 2025, 13:04 IST
Last Updated 12 ಮೇ 2025, 13:04 IST
ಪಾಳು ಬಿದ್ದ ಶೌಚಾಲಯ ಗುಂಡಿಯಲ್ಲಿ ಬಿದ್ದಿದ್ದ ಹಸು
ಪಾಳು ಬಿದ್ದ ಶೌಚಾಲಯ ಗುಂಡಿಯಲ್ಲಿ ಬಿದ್ದಿದ್ದ ಹಸು   

ಆಲ್ದೂರು: ಇಲ್ಲಿಗೆ ಸಮೀಪದ ಹಾಂದಿ ವಿಜಯನಗರ ನಿವಾಸಿ ಕೃಷ್ಣೇಗೌಡ ಎಂಬುವರ ಮನೆಯ ಹಿಂಭಾಗದಲ್ಲಿ ಶೌಚಾಲಯಕ್ಕೆಂದು ನಿರ್ಮಿಸಿ ಪಾಳು ಬಿದ್ದಿದ್ದ ಗುಂಡಿಗೆ ಬಿದ್ದಿದ್ದ ಹಸುವನ್ನು ಸೋಮವಾರ ರಕ್ಷಿಸಲಾಗಿದೆ.

ನಸುಕಿನ 3 ಗಂಟೆಗೆ ಕಾಲು ಜಾರಿ ಬಿದ್ದಿದ್ದ ಹಸುವನ್ನು ಹೆಸಗಲ್ ಶೌರ್ಯ ತಂಡದ ಸಂಯೋಜಕ ಅಣ್ಣಪ್ಪ ರಕ್ಷಿಸಿದರು.

ಹಸು ಬಿದ್ದಿದ್ದ ಮಾಹಿತಿಯನ್ನು ಪಂಚಾಯಿತಿ ಸದಸ್ಯ ಸುಂದರೇಶ್ ತಿಳಿಸಿದ್ದರು. ಶೌಚಾಲಯ ಗುಂಡಿ ಸುಮಾರು 10 ಅಡಿ ಆಳವಾಗಿತ್ತು. ಗುಂಡಿಯಲ್ಲಿ ಕೊಳಚೆ ಕಲುಷಿತ ನೀರು ತುಂಬಿಕೊಂಡಿತ್ತು. ದೊಡ್ಡ ಬೆಡ್‌ಶೀಟ್, ಕೇಬಲ್ ಬೆಲ್ಟ್ ಬಳಸಿ ಹಸುವನ್ನು ಮೇಲೆತ್ತಲಾಯಿತು ಎಂದು ಅಣ್ಣಪ್ಪ ತಿಳಿಸಿದರು.

ADVERTISEMENT

ಸತ್ತಿಹಳ್ಳಿ ಪಂಚಾಯಿತಿ ಅಧ್ಯಕ್ಷ ಧ್ರುವ ಕುಮಾರ್, ಉಪಾಧ್ಯಕ್ಷೆ ತಸ್ನೀಮಾ ನಾಜ್, ಸ್ಥಳೀಯರು ಅಣ್ಣಪ್ಪ ಅವರನ್ನು ಅಭಿನಂದಿಸಿದರು.

ಪಾಳು ಬಿದ್ದ ಶೌಚಾಲಯ ಗುಂಡಿಯಲ್ಲಿ ಬಿದ್ದಿದ್ದ ಹಸುವನ್ನು ರಕ್ಷಿಸಿದ ಶೌರ್ಯ ತಂಡದ ಅಣ್ಣಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.