ADVERTISEMENT

ಎಲೆಚುಕ್ಕಿ ರೋಗ: ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 19:47 IST
Last Updated 25 ಜನವರಿ 2023, 19:47 IST
ರವೀಂದ್ರ
ರವೀಂದ್ರ   

ಬಾಳೆಹೊನ್ನೂರು: ಎಲೆಚುಕ್ಕಿ, ಹಳದಿ ಎಲೆರೋಗದಿಂದಾಗಿ ಅಡಿಕೆ ಬೆಳೆ ನಾಶವಾಗಿದ್ದರಿಂದ ದಯಂಬಳ್ಳಿ ಗ್ರಾಮದ ಕಕ್ಕದ್ದೆ ಹೊಸನೆಲದ ರೈತ ರವೀಂದ್ರ (74) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ‘ಇವರಿಗೆ ಐದು ಎಕರೆ ಜಮೀನು ಇದೆ. ಫಸಲು ನಾಶವಾಗದಂತೆ ನಾಲ್ಕು ಭಾರಿ ಔಷಧಿ ಸಿಂಪಡಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.‌ ಇದರ ಜೊತೆಗೆ ಜಯಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹ 1.5 ಲಕ್ಷ ಹಾಗೂ ಇತರ ಕೈಸಾಲ ಕೂಡ ಮಾಡಿದ್ದು ಅದನ್ನು ತೀರಿಸಲು ಸಾಧ್ಯವಾಗದೆ ನೊಂದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ‘ ಎಂದು ಮೃತರ ಸಹೋ ದರ ರಾಜಣ್ಣ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT