ADVERTISEMENT

ನರಸಿಹಂರಾಜಪುರ | ಜಿಂಕೆ ಮಾಂಸ ವಶ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2024, 14:50 IST
Last Updated 3 ಸೆಪ್ಟೆಂಬರ್ 2024, 14:50 IST
ನರಸಿಂಹರಾಜಪುರ ತಾಲ್ಲೂಕು ಸಾಲೂರು ಗ್ರಾಮದ ಭಕ್ತವಾನಿ ಕಿರು ಅರಣ್ಯದಲ್ಲಿ ಚುಕ್ಕಿ ಜಿಂಕೆ ಶಿಕಾರಿ ಮಾಡಿದ ಆರೋಪಿಗಳನ್ನು ಅರಣ್ಯ ಇಲಾಖೆಯವರು ಬಂಧಿಸಿ ಜಿಂಕೆ ಮಾಂಸ ವಶಪಡಿಸಿಕೊಂಡರು
ನರಸಿಂಹರಾಜಪುರ ತಾಲ್ಲೂಕು ಸಾಲೂರು ಗ್ರಾಮದ ಭಕ್ತವಾನಿ ಕಿರು ಅರಣ್ಯದಲ್ಲಿ ಚುಕ್ಕಿ ಜಿಂಕೆ ಶಿಕಾರಿ ಮಾಡಿದ ಆರೋಪಿಗಳನ್ನು ಅರಣ್ಯ ಇಲಾಖೆಯವರು ಬಂಧಿಸಿ ಜಿಂಕೆ ಮಾಂಸ ವಶಪಡಿಸಿಕೊಂಡರು   

ನರಸಿಹಂರಾಜಪುರ: ತಾಲ್ಲೂಕಿನ ಹೊನ್ನೆಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲೂರು ಗ್ರಾಮದ ಭಕ್ತವಾನಿ ಕಿರು ಅರಣ್ಯದಲ್ಲಿ ಸೋಮವಾರ ಬೆಳಿಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಚರಣೆ ನಡೆಸಿ, ಚುಕ್ಕಿ ಜಿಂಕೆ ಮಾಂಸ ವಶಪಡಿಸಿಕೊಂಡಿದ್ದು 8 ಮಂದಿ ಆರೋಪಿಗಳ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಮೂವರನ್ನು ಬಂಧಿಸಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಅರಣ್ಯದಲ್ಲಿ ಹುಡುಕಾಟ ನಡೆಸಿದಾಗ ಜಿಂಕೆ ಮಾಂಸ ಹಾಗೂ ಜಿಂಕೆ ಕೊಂದು ಮಾಂಸ ಮಾಡುತ್ತಿದ್ದ  8 ಆರೋಪಿಗಳು ಕಂಡು ಬಂದಿದ್ದಾರೆ. ಇವರಲ್ಲಿ  ಐವರು ಪರಾರಿಯಾಗಿದ್ದಾರೆ.

ಹೊನ್ನೆಕೂಡಿಗೆ ಗ್ರಾಮ ಪಂಚಾಯಿತಿಯ ಬಿಳಾಲುಕೊಪ್ಪ ಗ್ರಾಮದ ಲಕ್ಕುಂದದ ಮಂಜುನಾಥ, ಅಣ್ಣಪ್ಪ ಹಾಗೂ ಬಿಳಾಲುಕೊಪ್ಪ ಗ್ರಾಮದ ಮಂಜುನಾಥ ಬಂಧಿತ ಆರೋಪಿಗಳು. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸ್ಥಳದಲ್ಲಿದ್ದ ಜಿಂಕೆ ಮಾಂಸ, ನಾಡ ಕೋವಿ,  ಕತ್ತಿ, ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಕೊಪ್ಪ ಡಿ.ಎಪ್.ಒ ಎಲ್.ನಂದೀಶ್, ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಎನ್.ಪ್ರವೀಣ ಕುಮಾರ್ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಅರುಣ ಬಾರಂಗಿ, ಅಕ್ಷತಾ, ಶ್ರೀನಿವಾಸ್, ಮಾರುತಿ ಮಾಳಿ, ಗಸ್ತು ಅರಣ್ಯ ಪಾಲಕರಾದ ಎಚ್.ಎಂ.ಪ್ರವೀಣ್, ಮಂಜಯ್ಯ, ಸಂಪ್ರೀತ, ಶ್ರೀಕಾಂತ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.