ಕಳಸ: ಪಟ್ಟಣದಲ್ಲಿ ಇನ್ನಷ್ಟು ಆಟೊ ನಿಲ್ದಾಣಗಳಿಗೆ ಅನುಮತಿ ನೀಡುವಂತೆ ಆಟೊ ಮಾಲೀಕರ ಸಂಘ ಮಂಗಳವಾರ ಕಳಸ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದೆ.
ಕಳಸದಲ್ಲಿ ಈಗಾಗಲೇ 9 ಸ್ಥಳಗಳಲ್ಲಿ ಆಟೊ ನಿಲ್ದಾಣಗಳಿವೆ. ಆದರೂ ಹೆಚ್ಚುತ್ತಿರುವ ಆಟೊ ಸಂಖ್ಯೆಗೆ ಅನುಗುಣವಾಗಿ ಬೇರೆಡೆ ನಿಲ್ದಾಣ ಗುರುತಿಸಬೇಕು ಎಂದು ಆಟೊ ಚಾಲಕರ ಸಂಘ ಪಂಚಾಯಿತಿಗೆ ಮನವಿ ಸಲ್ಲಿಸಿತು.
ಹೊರನಾಡು ರಸ್ತೆ, ಕೈಮರ, ಕೆ.ಎಂ.ರಸ್ತೆ, ಎಚ್.ಪಿ. ಪೆಟ್ರೋಲ್ ಬಳಿ, ಮೀನು ಮಾರುಕಟ್ಟೆ ಮತ್ತಿತರ ಸ್ಥಳಗಳಲ್ಲಿ ಆಟೊ ನಿಲ್ಲಿಸಲು ಅವಕಾಶ ನೀಡಬೇಕು. ಜೊತೆಗೆ ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಟೊಗಳನ್ನು ಮಾತ್ರ ನಿಲ್ದಾಣದಲ್ಲಿ ನಿಲ್ಲಿಸಲು ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಲಾಯಿತು.
ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್, ಆಟೊ ಚಾಲಕರ ಸಂಘದ ಜಗದೀಶ ಭಟ್, ಆನಂದ ಶೆಟ್ಟಿ, ಈಶ್ವರ, ಶ್ರೀಪಾಲ, ಪ್ರಭಾಕರ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.