ADVERTISEMENT

‘ಆಹಾರದಿಂದ ಮಧುಮೇಹ ನಿಯಂತ್ರಣ’

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 4:09 IST
Last Updated 17 ನವೆಂಬರ್ 2022, 4:09 IST
ಶೃಂಗೇರಿ ಮೆಣಸೆ ಗ್ರಾಮ ಪಂಚಾಯಿತಿಯಲ್ಲಿ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಸಾರ್ವಜನಿಕ ಅಸ್ಪತ್ರೆ ಆಯೋಜಿಸಿದ್ದ ವೈದ್ಯಕೀಯ ಶಿಬಿರವನ್ನು ಗ್ರಾಮ ಪಂಚಾಯಿತಿ ಸದಸ್ಯ ಅಜಿತ್ ಶೆಟ್ಟಿ ಉದ್ಘಾಟಿಸಿದರು
ಶೃಂಗೇರಿ ಮೆಣಸೆ ಗ್ರಾಮ ಪಂಚಾಯಿತಿಯಲ್ಲಿ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಸಾರ್ವಜನಿಕ ಅಸ್ಪತ್ರೆ ಆಯೋಜಿಸಿದ್ದ ವೈದ್ಯಕೀಯ ಶಿಬಿರವನ್ನು ಗ್ರಾಮ ಪಂಚಾಯಿತಿ ಸದಸ್ಯ ಅಜಿತ್ ಶೆಟ್ಟಿ ಉದ್ಘಾಟಿಸಿದರು   

ಶೃಂಗೇರಿ: ಒತ್ತಡದ ಬದುಕಿನ ಜೊತೆ ಅನಾರೋಗ್ಯಕರ ಜೀವನ ಶೈಲಿ ಮಧುಮೇಹ ಉಂಟಾಗಲು ಕಾರಣ. ಈ ಕಾಯಿಲೆ ಕಾಣಿಸಿಕೊಂಡಾಗ ವ್ಯಕ್ತಿ ತಜ್ಞ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಂಡು, ನಿಯಮಿತ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ಸರ್ಕಾರಿ ಅಸ್ಪತ್ರೆಯ ವೈದ್ಯ ಡಾ.ಕಾರ್ತಿಕ್ ತಿಳಿಸಿದರು.

ಮೆಣಸೆ ಗ್ರಾಮ ಪಂಚಾಯಿತಿಯಲ್ಲಿ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಸಾರ್ವಜನಿಕ ಅಸ್ಪತ್ರೆ ಆಯೋಜಿಸಿದ್ದ ವೈದ್ಯಕೀಯ ಶಿಬಿರದಲ್ಲಿ ಅವರು ಮಾತನಾಡಿದರು. ಮಧುಮೇಹ ಬಂದಾಗ ಆತಂಕಪಡುವ ಅವಶ್ಯಕತೆಯಿಲ್ಲ. ಈ ರೋಗದ ಕುರಿತು ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಕಾಯಿಲೆ ನಿರ್ವಹಣೆಯಲ್ಲಿ ಆಹಾರ ಸೇವನೆ ಅತಿಮುಖ್ಯ ಪಾತ್ರ ವಹಿಸುತ್ತದೆ. ಶರೀರದ ಗ್ಲೂಕೋಸ್ ಮಟ್ಟವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು. ವ್ಯಾಯಾಮ ಈ ರೋಗಕ್ಕೆ ಅತ್ಯುತ್ತಮ ಔಷಧ. ಕುರುಕಲು ತಿಂಡಿ, ಸಿದ್ಧ ಆಹಾರಗಳನ್ನು ಬದಿಗಿರಿಸಿದಾಗ ರೋಗವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಅಜಿತ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಸುಷ್ಮಾ ಸುರೇಂದ್ರ, ತ್ರಿಮೂರ್ತಿ, ರಾಜಣ್ಣ, ಶಾಮಣ್ಣ, ಆಸ್ಪತ್ರೆಯ ಆಪ್ತ ಸಮಾಲೋಚಕರಾದ ನೇಹಾ, ಲೋಕೇಶ್, ನಾಗಭರಣ್, ಸಿಬ್ಬಂದಿ ಲಿಂಗೇಶ್, ನಾಗವೇಣಿ ಬಿ, ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಯಶೋದಾ, ಆಶಾ ಕಾರ್ಯಕರ್ತೆಯರಾದ ಶಾರದಾ, ಸುರೇಖಾ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.