ADVERTISEMENT

‘ವೈದ್ಯಕೀಯ ವೃತ್ತಿ ಗೌರವಯುತ, ಜವಾಬ್ದಾರಿಯುತ ಸೇವೆ’

ವೈದ್ಯ ಡಾ.ರಾಮಚರಣ ಅಡ್ಯಂತಾಯಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 4:13 IST
Last Updated 30 ಜೂನ್ 2022, 4:13 IST
ಮೂಡಿಗೆರೆಯಲ್ಲಿ ಐವತ್ತು ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸಿದ ಡಾ. ರಾಮಚರಣ ಅಡ್ಯಂತಾಯ ಅವರಿಗೆ ಸಮಾನ ಮನಸ್ಕ ವೇದಿಕೆಯ ವತಿಯಿಂದ ಗೌರವಿಸಲಾಯಿತು. ಮಕ್ಕಳ ತಜ್ಞ ಡಾ. ಜೆ.ಪಿ. ಕೃಷ್ಣೇಗೌಡ, ನಿವೃತ್ತ ವೈದ್ಯ ಡಾ. ಎಂ.ಆರ್. ಮಾಧವಗೌಡ, ವಿಧಾನಪರಿಷತ್ ಉಸಭಾಪತಿ ಎಂ.ಕೆ. ಪ್ರಾಣೇಶ್, ಮುಖಂಡ ಬಿ.ಬಿ.ನಿಂಗಯ್ಯ ಇದ್ದರು.

ಮೂಡಿಗೆರೆ: ವೈದ್ಯಕೀಯ ವೃತ್ತಿಯು ಅತ್ಯಂತ ಗೌರವಯುತ ಹಾಗೂ ಜವಾಬ್ದಾರಿಯುತ ಸೇವೆ ಎಂದು ಮಕ್ಕಳ ತಜ್ಞ ಡಾ. ಜೆ.ಪಿ. ಕೃಷ್ಣೇಗೌಡ ಹೇಳಿದರು.

ಪಟ್ಟಣದಲ್ಲಿ ಸಮಾನ ಮನಸ್ಕರ ವೇದಿಕೆಯಿಂದ ಏರ್ಪಡಿಸಿದ್ದ ವೈದ್ಯ ಡಾ. ರಾಮಚರಣ ಅಡ್ಯಂತಾಯ ಅವರಿಗೆ ಸಾರ್ವಜನಿಕ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅಸಹಾಯಕರಿಗೆ ಕೈಲಾದ ಸಹಾಯವನ್ನು ಮಾಡಬೇಕು. ವೈದ್ಯಕೀಯ ವೃತ್ತಿಯಲ್ಲಿ ಜನರ ಅಮೂಲ್ಯವಾದ ಜೀವ ಉಳಿಸುವ ಕೆಲಸವನ್ನು ಮಾಡಬಹುದು’ ಎಂದರು.

ADVERTISEMENT

‘ವೈದ್ಯ ಡಾ. ರಾಮಚರಣ ಅಡ್ಯಂತಾಯ ಮೂಡಿಗೆರೆಯಲ್ಲಿ ಪ್ರಥಮ ಬಾರಿಗೆ ಎಕ್ಸ್‌ರೇ ಹಾಗೂ ವೈದ್ಯಕೀಯ ಪ್ರಯೋಗಾಲಯ ಅಳವಡಿಸಿದ್ದರು. ಯಾವುದೇ ತುರ್ತು ಸಂದರ್ಭದಲ್ಲಿಯೂ ಸ್ಪಂದಿಸುತ್ತಿದ್ದಾರೆ. ಇತರ ಕ್ಷೇತ್ರದಲ್ಲೂ ಕೊಡುಗೆ ನೀಡಿದ್ದಾರೆ’ ಎಂದು ಪ್ರಶಂಸಿದರು.

ನಿವೃತ್ತ ವೈದ್ಯ ಡಾ. ಎಂ.ಆರ್. ಮಾಧವಗೌಡ, ವಿಧಾನಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್, ಮುಖಂಡ ಬಿ.ಬಿ.ನಿಂಗಯ್ಯ ಮಾತನಾಡಿದರು. ರಾಜೀವಿ ಅಡ್ಯಂತಾಯ, ಕಾಫಿ ಬೆಳೆಗಾರರಾದ ಬಿ.ಕೆ. ಜಗಮೋಹನ್, ಜಿ.ಎಂ. ಲಕ್ಷ್ಮಣಗೌಡ, ದೀಪಕ್ ದೊಡ್ಡಯ್ಯ, ಜಿ.ಎ. ಲಕ್ಷ್ಮಣಗೌಡ, ಸುರೇಶ್ ಶೆಟ್ಟಿ, ಬಿ.ಎನ್. ಮನಮೋಹನ್, ವಿನೋದ್ ಕುಮಾರ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.