
ತರೀಕೆರೆ: ಕಸಬಾ ಹೋಬಳಿಯ ಅತ್ತಿಗನಾಳು, ಗುಡ್ಡದಬಸವನಹಳ್ಳಿ, ಭೈರಾಪುರ, ಕಂಚೇನಹಳ್ಳಿ ಮೊದಲಾದೆಡೆ ಕಾಡಾನೆಗಳು ರೈತರ ಜಮೀನುಗಳಿಗೆ ನುಗ್ಗಿ ರಾಗಿ, ಜೋಳ ಮತ್ತು ತೋಟದ ಬೆಳೆಗಳನ್ನು ತಿಂದು, ತುಳಿದು ಹಾಳುಮಾಡಿವೆ.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಸಂಜೆಯಿಂದ ಮುಂಜಾನೆವರೆಗೆ ಹೊಲ, ಗದ್ದೆ, ತೋಟಗಳಿಗೆ ದಾಳಿ ಮಾಡುತ್ತಿರುವ ಈ ಆನೆಗಳು, ಕೆಲವೊಂದು ರೈತರ ಮೇಲೆ ದಾಳಿ ಮಾಡಿದಾಗ ತಪ್ಪಿಸಿಕೊಂಡು ಓಡಿ ಹೋಗಿದ್ದೇವೆ ಎಂದು ನೊಂದ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅರಣ್ಯ ಇಲಾಖೆಯವರು ಕಾಡಾನೆ ಆನೆಗಳನ್ನು ಸ್ಥಳಾಂತರಿಸದಿದ್ದರೆ, ಬೆಳೆಗಳನ್ನು ಆನೆಗಳು ಸಂಪೂರ್ಣ ಹಾಳು ಮಾಡುವುದಲ್ಲದೆ ರೈತರ ಪ್ರಾಣಹಾನಿ ಸಂಭವಿಸಬಹುದು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.