ADVERTISEMENT

ಫ್ಲೆಕ್ಸ್ ಅಳವಡಿಕೆ; ಅನುಮತಿ ಕಡ್ಡಾಯ

ದಸರಾ ಮತ್ತು ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಸಿಪಿಐ ಗುರುಪ್ರಸಾದ್

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 6:06 IST
Last Updated 4 ಅಕ್ಟೋಬರ್ 2022, 6:06 IST
ಬೀರೂರು ಪೊಲೀಸ್ ಠಾಣೆಯಲ್ಲಿ ದಸರಾ ಮತ್ತು ಈದ್ ಮಿಲಾದ್ ಆಚರಣೆ ಕುರಿತು ಶಾಂತಿಸಭೆ ನಡೆಯಿತು. ಸಿಪಿಐ ಗುರುಪ್ರಸಾದ್, ಪಿಎಸ್‍ಐ ಎನ್.ಸಿ.ವಿಶ್ವನಾಥ್ ಇದ್ದರು.
ಬೀರೂರು ಪೊಲೀಸ್ ಠಾಣೆಯಲ್ಲಿ ದಸರಾ ಮತ್ತು ಈದ್ ಮಿಲಾದ್ ಆಚರಣೆ ಕುರಿತು ಶಾಂತಿಸಭೆ ನಡೆಯಿತು. ಸಿಪಿಐ ಗುರುಪ್ರಸಾದ್, ಪಿಎಸ್‍ಐ ಎನ್.ಸಿ.ವಿಶ್ವನಾಥ್ ಇದ್ದರು.   

ಬೀರೂರು: ವಿಜಯದಶಮಿ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿ ಸೌಹಾರ್ದದಿಂದ ಆಚರಿಸುವಂತೆ ಸಿಪಿಐ ಗುರುಪ್ರಸಾದ್ ಸಲಹೆ ನೀಡಿದರು.

ದಸರಾ ಮತ್ತು ಈದ್ ಮಿಲಾದ್ ಅಂಗವಾಗಿ ಬೀರೂರು ಪೊಲೀಸ್ ಠಾಣೆಯಲ್ಲಿ ಸೋಮವಾರ ತರೀಕೆರೆ ಡಿವೈಎಸ್‍ಪಿ ನಾಗರಾಜ್ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ದಸರಾ ಮತ್ತು ಕಾರಣಿಕ ಮಹೋತ್ಸವದಲ್ಲಿ ಬಂಟಿಂಗ್ಸ್ ಮತ್ತು ಫ್ಲೆಕ್ಸ್‌ಗಳನ್ನು ಅಳವಡಿಸುವ ಮುನ್ನ ಪುರಸಭೆಯ ಅನುಮತಿ ಪಡೆಯಬೇಕು. ವಿಜಯದಶಮಿಯಂದು ಗಣಪತಿ ಮತ್ತು ದೇವರು ಸಾಗುವ ಮೆರವಣಿಗೆ ಮಾರ್ಗಗಳನ್ನು ಪೊಲೀಸ್ ಇಲಾಖೆಯ ಗಮನಕ್ಕೆ ತರುವುದು ಕಡ್ಡಾಯವಾಗಿದೆ.

ADVERTISEMENT

ಬೀರೂರು ಪಟ್ಟಣದಲ್ಲಿ ಸೌಹಾರ್ದಕ್ಕೆ ಒಳ್ಳೆಯ ಹೆಸರಿದೆ. ಇದನ್ನು ಹೀಗೆಯೇ ಮುಂದುವರೆಸಿಕೊಂಡು ಹೋಗುವಂತೆ ಕಿವಿಮಾತು ಹೇಳಿದರು.

ಈದ್ ಮಿಲಾದ್ ಆಚರಣೆಯ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಡಿಜೆಗೆ ನಿರ್ಬಂಧವಿದೆ. ಖಾಜಿಮೊಹಲ್ಲಾ ಮಸೀದಿ ಹೊರತುಪಡಿಸಿ ಇನ್ನುಳಿದ ಮೂರೂ ಮಸೀದಿಗಳ ಅನುಯಾಯಿಗಳು ಮಹಾತ್ಮ ಗಾಂಧಿ ವೃತ್ತದಲ್ಲಿ ಒಟ್ಟುಗೂಡಿ, ಮೆರವಣಿಗೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ತೆರಳಬಹುದು. ಶಾಂತಿ ಮತ್ತು ಸೌಹಾರ್ದ ವಾತಾವರಣಕ್ಕೆ ಧಕ್ಕೆಯಾಗದಂತೆ ಕಾರ್ಯಕ್ರಮಗಳನ್ನು ನಿರ್ವಹಿಸಬೇಕು. ಮುಂದಾಳತ್ವ ವಹಿಸುವವರು
ಮೆರವಣಿಗೆಯ ಜತೆಯಲ್ಲಿಯೇ ಹೆಜ್ಜೆ ಹಾಕಿ ಸಂಗಡಿಗರನ್ನು ನಿಯಂತ್ರಿಸಬೇಕು ಎಂದು ಸೂಚಿಸಿದರು.

ಪಿಎಸ್‍ಐ ಎನ್.ಸಿ.ವಿಶ್ವನಾಥ್, ಅಪರಾಧ ಪಿಎಸ್‍ಐ ಬಸವರಾಜಪ್ಪ, ಮಾನಿಕ್‍ ಬಾಷಾ, ಎಂ.ಪಿ.ವಿಕ್ರಂ, ಮುಬಾರಕ್, ಮುಕ್ತಿಯಾರ್, ಸಂತೋಷ್ ಕುಮಾರ್, ದರ್ಶನ್, ಚೇತನ್, ಇಮ್ರಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.