
ಕಡೂರು: ಕರ್ನಾಟಕ ಜಾನಪದ ಅಕಾಡೆಮಿಯ 2025ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳು ಘೋಷಣೆಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಿಂದ ಕಡೂರು ತಾಲ್ಲೂಕಿನ ವೀರಗಾಸೆ ಕಲಾವಿದ ಹುಲಿಹಳ್ಳಿ ಎಚ್.ಎಂ. ರವಿ ಅವರಿಗೆ ಪ್ರಶಸ್ತಿ ಲಭಿಸಿದೆ.
ಚೌಳಹಿರಿಯೂರು ಹೋಬಳಿ ಅಂತರಘಟ್ಟೆ ಬಳಿಯ ಹುಲಿಹಳ್ಳಿಯ ಎಚ್.ಎಂ.ರವಿ ಕಳೆದ 25 ವರ್ಷಗಳಿಂದ ವೀರಗಾಸೆ ಜಾನಪದ ಕಲಾಪ್ರಕಾರದ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಹುಲಿಹಳ್ಳಿಯ ಮಹಾಲಿಂಗಪ್ಪ ಮತ್ತು ಮರುಳಸಿದ್ದಮ್ಮ ಕೃಷಿಕ ದಂಪತಿಯ ಪುತ್ರ ರವಿ 1997ರಿಂದ ಕಲಾತಂಡಗಳ ಸದಸ್ಯರಾಗಿ ವೀರಗಾಸೆ ಕುಣಿತದಲ್ಲಿ ಗುರುತಿಸಿಕೊಂಡಿದ್ದು, ಪ್ರಮುಖವಾಗಿ 2004ರಲ್ಲಿ ಗೌರಿಬಿದನೂರಿನ ಕುವೆಂಪು ಜನ್ಮಶತಮಾನೋತ್ಸವ ಆಚರಣಾ ಸಮಿತಿ, 2006ರಲ್ಲಿ ಚಿತ್ರದುರ್ಗದಲ್ಲಿ ಮುರುಘಾ ಮಠದ ಆಶ್ರಯದಲ್ಲಿ ಜರುಗಿದ ಶರಣ ಸಂಸ್ಕೃತಿ ಉತ್ಸವ, ಮೈಸೂರು ವಿಭಾಗೀಯ ಮಟ್ಟದ ಯುವಜನಮೇಳ, ತುಮಕೂರಿನಲ್ಲಿ ನಡೆದ ವಿರಾಟ್ ಹಿಂದೂ ಸಮಾಜೋತ್ಸವ, ಕೆ.ಆರ್.ನಗರದ ಎಡತೊರೆಯಲ್ಲಿ ನಡೆದ ಯುವ ವೈಭವ, ರಾಜ್ಯ ಮಟ್ಟದ ಯುವಜನ ಮೇಳ ಮೊದಲಾದ ಸಮಾರಂಭಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.