ADVERTISEMENT

ದೆಹಲಿಯಲ್ಲಿ ಮಲೆನಾಡಿನ ಜಾನಪದ ಕಲೆ

ಅಭಿನವ ಪ್ರತಿಭಾ ವೇದಿಕೆಯಿಂದ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 6:04 IST
Last Updated 8 ನವೆಂಬರ್ 2022, 6:04 IST
ದೆಹಲಿಲ್ಲಿ ನರಸಿಂಹರಾಜಪುರದ ಅಭಿನವ ಪ್ರತಿಭಾ ವೇದಿಕೆಯ ಅಧ್ಯಕ್ಷ ಅಭಿನವಗಿರಿರಾಜ್ ಅವರಿಗೆ ಮಲೆನಾಡ ಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು
ದೆಹಲಿಲ್ಲಿ ನರಸಿಂಹರಾಜಪುರದ ಅಭಿನವ ಪ್ರತಿಭಾ ವೇದಿಕೆಯ ಅಧ್ಯಕ್ಷ ಅಭಿನವಗಿರಿರಾಜ್ ಅವರಿಗೆ ಮಲೆನಾಡ ಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು   

ನರಸಿಂಹರಾಜಪುರ: ದೆಹಲಿಯ ಕರ್ನಾಟಕ ಭವನದಲ್ಲಿ ದೆಹಲಿಯ ಕರ್ನಾಟಕ ಸಂಘದ ಅಮೃತ ಮಹೋತ್ಸವದ ಅಂಗವಾಗಿ ಅ. 29 ಮತ್ತು 30ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಅಭಿನವ ಪ್ರತಿಭಾ ವೇದಿಕೆಯ 14 ಕಲಾವಿದರ ತಂಡ ಮಲೆನಾಡಿನ ಸಾಂಸ್ಕೃತಿಕ ಉತ್ಸವದಲ್ಲಿ ಮಲೆನಾಡಿನ ಜಾನಪದ ಕಲೆಗಳನ್ನು ಪ್ರದರ್ಶನ ಮಾಡಿದರು.

ನರಸಿಂಹರಾಜಪುರ ತಾಲ್ಲೂಕಿನಿಂದ ಅಭಿನವ ಪ್ರತಿಭಾ ವೇದಿಕೆಯ ಅಧ್ಯಕ್ಷ ಅಭಿನವ ಗಿರಿರಾಜ್, ಕಲಾವಿದರಾದ ಮಂಜು.ಎನ್.ಗೌಡ, ಶೆಟ್ಟಿಕೊಪ್ಪ ಮಹೇಶ್, ಸಾರ್ಯ ಗುರುಮೂರ್ತಿ, ದೊಡ್ಡಿನತಲೆ ಕೇಶವ, ಲೋಕೇಶ್, ರಾಮಮೋಹನ, ಸಾಜು, ಮೇಲ್ವಿಚಾರಕಿ ಮಾಲ, ಗ್ರೀಷ್ಮಾ, ಗೀತಾಂಜಲಿ ತಂಡವು ದೆಹಲಿಗೆ ತೆರಳಿ ಎರಡು ದಿನಗಳ ಕಾಲ ಮಲೆನಾಡಿನ ಕಲೆಗಳಾದ ಅಂಟಿಕೆ ಪಿಂಟಿಗೆ, ಗೀಗಿಪದ, ಭಜನೆ, ಭಾವಗೀತೆ, ತತ್ವಪದ, ಲಾವಣಿ, ಜಾನಪದಗೀತೆ ಹಾಡುವುದರ ಮೂಲಕ ಪುನೀತ್ ರಾಜ್ ಕುಮಾರ್ ಅವರಿಗೆ ಗೀತ ನಮನ ಸಲ್ಲಿಸಿತ್ತು.

ಸಮಾರೋಪ ಸಮಾರಂಭದಲ್ಲಿ ಅಭಿನವ ಗಿರಿರಾಜ್ ಅವರಿಗೆ ದೆಹಲಿ ಕರ್ನಾಟಕ ಸಂಘವು ‘ ಮಲೆನಾಡಿನ ಸಾಂಸ್ಕೃತಿಕ ರಾಯಭಾರಿ’ ಎಂಬ ಪ್ರಶಸ್ತಿ ನೀಡಿ ಗೌರವಿಸಿತು.

ADVERTISEMENT

ಕಲಾವಿದ ಹಾಗೂ ಕೃಷಿಕ ಕಣಿವೆ ವಿನಯ್ ಅವರಿಗೆ ಕೃಷಿಕ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.