ADVERTISEMENT

‘ಅಹಿಂಸೆಯೂ ಅಸ್ತ್ರ ಎಂಬುದನ್ನು ತೋರಿಸಿದವರು ಗಾಂಧೀಜಿ’

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 4:48 IST
Last Updated 3 ಅಕ್ಟೋಬರ್ 2022, 4:48 IST
ಅಜ್ಜಂಪುರದಲ್ಲಿ ಭಾನುವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ವೇದಿಕೆ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.
ಅಜ್ಜಂಪುರದಲ್ಲಿ ಭಾನುವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ವೇದಿಕೆ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.   

ಅಜ್ಜಂಪುರ : ‘ಹೋರಾಟದಲ್ಲಿ ಅಹಿಂಸೆ ಕೂಡಾ ಪ್ರಬಲ ಅಸ್ತ್ರ ಎಂಬುದನ್ನು ಜಗತ್ತಿಗೆ ಮೊದಲ ಬಾರಿಗೆ ತೋರಿಸಿಕೊಟ್ಟವರು ಗಾಂಧೀಜಿ’ ಎಂದು ನಾಗರಿಕರ ವೇದಿಕೆಯ ಅಧ್ಯಕ್ಷ ಡಿ.ಶಿವಮೂರ್ತಿ ಅಭಿಪ್ರಾಯಪಟ್ಟರು.

ಪಟ್ಟಣದ ಹಿರಿಯ ನಾಗರಿಕರ ವೇದಿಕೆ ಕಾರ್ಯಾಲಯದಲ್ಲಿ ಭಾನುವಾರ ನಡೆದ ವಾರ್ಷಿಕ ಸಭೆ, ಗಾಂಧಿ-ಶಾಸ್ತ್ರಿ ಜಯಂತಿ ಮತ್ತು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೆ ಪಾಕಿಸ್ತಾನದ ಆಕ್ರಮಣಶೀಲತೆಗೆ ಕೆಚ್ಚೆದೆಯ ಉತ್ತರ ಕೊಟ್ಟವರು ಲಾಲ್ ಬಹದ್ದೂರ್ ಶಾಸ್ತ್ರಿ ಎಂದು ಎಚ್.ಟಿ. ಸಿದ್ದಪ್ಪ ಸ್ಮರಿಸಿದರು.

ADVERTISEMENT

ರಾಜ್ಯ ಸಾರಿಗೆ ಬಸ್ ಆಗಮನ ಮತ್ತು ನಿರ್ಗಮನ ಹಾಗೂ ರೈಲ್ವೆ ವೇಳಾಪಟ್ಟಿಯನ್ನು ಬಸ್‌ ನಿಲ್ದಾಣದಲ್ಲಿ ಪ್ರದರ್ಶಿಸಲು ಕ್ರಮ ವಹಿಸಲಾಗುವುದು ಎಂದು ವೇದಿಕೆ ಕಾರ್ಯದರ್ಶಿ ಹ.ಪಟ್ಟಸ್ವಾಮಿ ತಿಳಿಸಿದರು.

ಕಾರ್ಯಾಧ್ಯಕ್ಷ ಎಂ.ಲಕ್ಷ್ಮಣ್ ವರದಿ ವಾಚಿಸಿದರು. ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.

ಈಚೆಗೆ ನಿಧನರಾದ ವೇದಿಕೆ ಸದಸ್ಯರಾದ ಎನ್.ಡಿ.ನಾಗರಾಜ್, ಬಿ.ಹಾಲಪ್ಪ, ಮರುಳಸಿದ್ದಯ್ಯ, ಜಿ.ಸಿ. ತಿಮ್ಮಪ್ಪ ‌ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕೆ.ಸಿ.ಶಿವಮೂರ್ತಿ, ಜಯಮೂರ್ತಿ ಗಾಂಧಿ-ಶಾಸ್ತ್ರಿ ಜಯಂತಿ ಕುರಿತು ಮಾತನಾಡಿದರು. ಲಿಂಗಯ್ಯ ಮತ್ತು ಬಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.