ADVERTISEMENT

ಚಿಕ್ಕಮಗಳೂರು: ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 14:45 IST
Last Updated 4 ಜುಲೈ 2022, 14:45 IST
   

ಚಿಕ್ಕಮಗಳೂರು: ತಾಲ್ಲೂಕಿನ ಹೊಸಪೇಟೆಯ ಬಾಲಕಿ ಸುಪ್ರಿತಾ ಶಾಲೆ ಮುಗಿಸಿ ಸಂಜೆ ಮನೆಗೆ ಹೋಗುವಾಗ ಕಂಬಿಹಳ್ಳಿ ಸಮೀಪ ಕಾಫಿ ಎಸ್ಟೇಟ್‌ನೊಳಗಿನ ಹಳ್ಳದಲ್ಲಿ ತೇಲಿಹೋಗಿದ್ದು, ಅಗ್ನಿಶಾಮಕ ಸಿಬ್ಬಂದಿ ಶೋಧದಲ್ಲಿ ತೊಡಗಿದ್ದಾರೆ.

ತೊಗರಿಹಂಕಲ್‌ ಸರ್ಕಾರಿ ಪ್ರಾಥಮಿಕ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಸುಪ್ರಿತಾ ಹಳ್ಳದಲ್ಲಿ ತೇಲಿ ಹೋಗಿದ್ದಾರೆ. ಸುಪ್ರಿತಾ ಹೊಸಪೇಟೆಯ ಆ್ಯಂಡ್ರೂ ಮತ್ತು ರೋಸಾ ದಂಪತಿ ಪುತ್ರಿ.

‘ಸಹೋದರ ಸೈಮನ್‌, ಸ್ನೇಹಿತರೊಂದಿಗೆ ಸುಪ್ರಿತಾ ಮನೆಗೆ ಸಾಗುವಾಗ ಅವಘಡ ಸಂಭವಿಸಿದೆ. ಕಾಲಿಗೆ ಅಂಟಿದ್ದ ಮಣ್ಣು ತೊಳೆದುಕೊಳ್ಳಲು ಹಳ್ಳದ ಬಳಿ ಹೋದಾಗ ತೇಲಿ ಹೋಗಿದ್ದಾರೆ’ ಎಂದು ಅಗ್ನಿಶಾಮಕ ಅಧಿಕಾರಿ ಶಶಿಧರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಅಗ್ನಿಶಾಮಕ ದಳದ ನಾಲ್ಕು ತಂಡಗಳು ಹಳ್ಳದಲ್ಲಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ. ಹಳ್ಳದ ಬಳಿ ಜನರು ಜಮಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.