ಆಲ್ದೂರು: ಸಮೀಪದ ಕೆಳಗೂರು ಪಂಚಾಯಿತಿ ವ್ಯಾಪ್ತಿಯ ಬಿದ್ದಗೋಡು ಗ್ರಾಮದಲ್ಲಿ ಪರವಾನಗಿ ಇಲ್ಲದೆ ಮನೆಯಲ್ಲಿ ಇರಿಸಿಕೊಂಡಿದ್ದ ಒಂಟಿ ನಳಿಕೆ ನಾಡ ಬಂದೂಕುಗಳನ್ನು ಪಿಎಸ್ಐ ಅಕ್ಷಿತಾ ಕೆ.ಪಿ ನೇತೃತ್ವದ ಪೊಲೀಸರ ತಂಡ ಗುರುವಾರ ವಶಕ್ಕೆ ಪಡೆದಿದೆ.
ಬಿದ್ದಗೋಡು ಗ್ರಾಮದ ರವಿ ಮತ್ತು ಬಿಜಿ ಮೋಹನ್ ಎಂಬುವರ ಮನೆಯಲ್ಲಿ ಹಲವಾರು ವರ್ಷಗಳಿಂದ ಪರವಾನಗಿ ಪಡೆಯದೆ ಬಂದೂಕು ಉಪಯೋಗಿಸುತ್ತಿರುವ ಮಾಹಿತಿ ಆಧರಿಸಿ ದಾಳಿ ನಡೆದಿದೆ. ಆರೋಪಿಗಳ ವಿರುದ್ಧಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.