ADVERTISEMENT

ರಂಭಾಪುರಿ ಪೀಠ: ಗುರುಪೂರ್ಣಿಮೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 16:49 IST
Last Updated 5 ಜುಲೈ 2020, 16:49 IST
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ವೀರಸೋಮೇಶ್ವರ ಸ್ವಾಮೀಜಿಯ ಪಾದಪೂಜೆ ನೆರವೇರಿಸಲಾಯಿತು.
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ವೀರಸೋಮೇಶ್ವರ ಸ್ವಾಮೀಜಿಯ ಪಾದಪೂಜೆ ನೆರವೇರಿಸಲಾಯಿತು.   

ಬಾಳೆಹೊನ್ನೂರು: ‘ಅಧ್ಯಾತ್ಮ ಲೋಕ ದಲ್ಲಿ ಗುರುವಿಗೆ ಮೊದಲ ಸ್ಥಾನವಿದೆ. ಶಿಷ್ಯನ ಅಜ್ಞಾನ ಕಳೆದು ಬದುಕಿಗೆ ಬೆಳಕು ನೀಡುವುದು ಗುರುವಿನ ಧರ್ಮ. ಗುರುಪೂರ್ಣಿಮೆಯ ದಿನ ಗುರುವಿಗೆ ಕೃತಜ್ಞತೆ ಸಲ್ಲಿಸುವುದೇ ಮೂಲ ಉದ್ದೇಶ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.

‌ ಪೀಠದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ರಂಭಾಪುರಿ ಗುರುಭವನ ದಲ್ಲಿ ಜರುಗಿದ ಪಾದಪೂಜಾ – ಧರ್ಮ ಸಂದೇಶ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ‘ಮಾನವ ಜೀವನದಲ್ಲಿ ಗುರು ಮತ್ತು ಗುರಿ ಮುಖ್ಯ. ಗುರಿ ಸಾಧನೆಗೆ ಆತ್ಮವಿಕಾಸಕ್ಕೆ ಗುರು ಬೋಧಾಮೃತವೇ ಮೂಲ’ ಎಂದರು.

ಸಿದ್ಧರಬೆಟ್ಟದ ವೀರಭದ್ರ ಶಿವಾ ಚಾರ್ಯ ಸ್ವಾಮೀಜಿ, ಮಳಲಿಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಚಳಗೇರಿ ಹಿರೇಮಠದ ಸಿದ್ಧವೀರ ಶಿವಾಚಾರ್ಯ ಸ್ವಾಮೀಜಿ ಅವರು ರಂಭಾಪುರಿ ಸ್ವಾಮೀಜಿಯ ಪಾದಪೂಜಾ ನೆರವೇರಿಸಿದರು.

ADVERTISEMENT

ನಂತರ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಬ್ರಹ್ಮಾಂಡ ಗುರೂಜಿ, ಸಿದ್ಧರಬೆಟ್ಟ ಸ್ವಾಮೀಜಿ ಮತ್ತು ಶಿಕ್ಷಣ ತಜ್ಞ ಮೈಲಾರಪ್ಪ ಗುರು ಮಹತ್ವ ಕುರಿತು ಮಾತನಾಡಿದರು. ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ, ಡಾ.ಜಯಶಂಕರ, ಬೆಂಗಳೂರಿನ ಪ್ರಸನ್ನ ಕುಮಾರ್, ಕಲಬುರ್ಗಿ ಶಿವಶರಣಪ್ಪ ಸೀರಿ, ದಾರುಕ ಶಾಸ್ತ್ರಿ, ಶಿಕ್ಷಕ ವೀರೇಶ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.