ಚಿಕ್ಕಮಗಳೂರು: ಚುನಾವಣೆ ಮುನ್ನಾದಿನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ದ್ವೇಷದ ಹೇಳಿಕೆ ಪ್ರಕಟಿಸಿದ ಆರೋಪದಲ್ಲಿ ಬಿಜೆಪಿ ಮುಖಂಡ ಸಿ.ಟಿ. ರವಿ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ಪೊಲೀಸ್ ಇಲಾಖೆ ದಾಖಲಿಸಿದೆ.
ಏ.25ರಂದು ಎಕ್ಸ್‌ನಲ್ಲಿ ಹೇಳಿಕೆ ಪ್ರಕಟಿಸಿದ್ದ ಸಿ.ಟಿ. ರವಿ ಅವರು, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ದೇಶದ ಸಂಪತ್ತಿನ ಮೇಲೆ ಮೊದಲ ಹಕ್ಕು ಹೊಂದಲಿದೆ’ ಎಂದು ಪೋಸ್ಟ್ ಮಾಡಿದ್ದರು. ಏ.26ರಂದು ಪ್ರಕಟಿಸಿದ್ದ ಪೋಸ್ಟ್‌ನಲ್ಲಿ ‘ಕಾಂಗ್ರೆಸ್‌ನ ಪ್ರಣಾಳಿಕೆ ನೋಡಿದರೆ ಇಸ್ಲಾಮಿಕ್ ದೇಶಗಳ ಐಎಸ್ ರೀತಿಯಲ್ಲಿದೆ’ ಎಂದಿದ್ದರು.
ಎರಡೂ ಪೋಸ್ಟ್‌ಗಳ ಕುರಿತು ಸಹಾಯಕ ಚುನಾವಣಾಧಿಕಾರಿ ನೀಡಿದ್ದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.