ಕಡೂರು: ಸೋಮವಾರ ಸುರಿದ ಭಾರಿ ಮಳೆಗೆ ಚಿಕ್ಕಂಗಳ ಗ್ರಾಮದಲ್ಲಿ ಮನೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಗೋಪಾಲ ಗೌಡ (65) ಮೃತರು. ಅಂಗವಿಕಲರಾಗಿದ್ದ ಅವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಮಧ್ಯರಾತ್ರಿ ಮನೆಯ ಗೋಡೆ ಕುಸಿದು ಬಿದ್ದು ಅವರು ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪೂರ್ಣಿಮಾ, ಇಓ ಸಿ.ಆರ್.ಪ್ರವೀಣ್ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಯರದಕೆರೆಯಲ್ಲಿ ಒಂದು ಮನೆ ಕುಸಿದಿದೆ. ಶ್ರೀರಾಂ ಪುರದಲ್ಲಿ ಹತ್ತು ಮನೆಗಳಿಗೆ ನೀರು ನುಗ್ಗಿದೆ. ಕೆ.ಎಂ.ರಸ್ತೆ ಹಾದು ಹೋಗಿರುವ ಲಕ್ಷ್ಮೀಪುರ ಗ್ರಾಮದಲ್ಲಿ ಮಳೆ ನೀರು 30ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದೆ. ರಸ್ತೆ ಪಕ್ಕ ಅಪೂರ್ಣಗೊಂಡಿರುವ ಚರಂಡಿ ತುಂಬಿ ನೀರು ಮುಂದೆ ಹರಿದು ಹೋಗಲಾಗದೆ ಮನೆಗಳಿಗೆ ನುಗ್ಗಿದೆ ಎಂದು ಸ್ಥಳೀಯರು ಆರೋಪಿಸಿ ಹೆದ್ದಾರಿ ತಡೆಗೆ ಪ್ರಯತ್ನಿಸಿದರು. ಸ್ಥಳಕ್ಕೆ ತಹಶೀಲ್ದಾರ್ ಪೂರ್ಣಿಮಾ, ಪಿಎಸ್‌ಐ ಪವನ್ ಕುಮಾರ್ ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.