ADVERTISEMENT

ಚಿಕ್ಕಮಗಳೂರು: ಧಾರಕಾರ ಮಳೆ; ರಸ್ತೆ ಬದಿ ಮಣ್ಣು ಕುಸಿತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 11:21 IST
Last Updated 4 ಜುಲೈ 2022, 11:21 IST
ಚಿಕ್ಕಮಗಳೂರು ಜಿಲ್ಲೆಯ ಕಳಸ– ಹೊರನಾಡು ಸಂಪರ್ಕ ಮಾರ್ಗದ ಹೆಬ್ಬೊಳೆ ಸೇತುವೆ ಮೇಲೆ ನೀರು ಹರಿಯಿತು.
ಚಿಕ್ಕಮಗಳೂರು ಜಿಲ್ಲೆಯ ಕಳಸ– ಹೊರನಾಡು ಸಂಪರ್ಕ ಮಾರ್ಗದ ಹೆಬ್ಬೊಳೆ ಸೇತುವೆ ಮೇಲೆ ನೀರು ಹರಿಯಿತು.   

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಕಾರವಾಗಿ ಮಳೆಯಾಗಿದ್ದು, ಕೊಪ್ಪ ತಾಲ್ಲೂಕಿನ ಹಿರೇಗದ್ದೆ – ಜಯಪುರ ಮಾರ್ಗದಲ್ಲಿ ಒಂದು ಕಡೆ ರಸ್ತೆ ಬದಿ ಮಣ್ಣು ಕುಸಿದಿದೆ.

ಶೃಂಗೇರಿ ತಾಲ್ಲೂಕಿನ ಮೂರು ಕಡೆ ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ, ಕೊಡಗೆಮಕ್ಕಿಯಲ್ಲಿ ರಸ್ತೆ ಪಕ್ಕದಲ್ಲಿ ಮಣ್ಣು ಕುಸಿದಿದೆ.

ಕಳಸ ತಾಲ್ಲೂಕಿನ ಸಂಸೆ ಬಳಿಯ ಪಾತಿಗುಡ್ಡ ಪ್ರದೇಶದಲ್ಲಿ ಮನೆಯೊಂದರ ಮೇಲೆ ವೃಕ್ಷ ಉರುಳಿ ಹಾನಿಯಾಗಿದೆ. ಕಳಸ – ಹೊರನಾಡು ಸಂಪರ್ಕ ಮಾರ್ಗದ ಹೆಬ್ಬೊಳೆ ಸೇತುವೆ ಮೇಲೆ ನೀರು ಹರಿಯಿತು. ಭದ್ರಾ, ತುಂಗಾ, ಹೇಮಾ ನದಿಗಳು ಮೈದುಂಬಿ ಹರಿಯುತ್ತಿವೆ. ಕೆರೆಕಟ್ಟೆ– 18.7, ಕಿಗ್ಗಾ–13.3 ಸೆಂ.ಮೀ ಮಳೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.