
ಪ್ರಜಾವಾಣಿ ವಾರ್ತೆಹೇಮಾವತಿ ಉಗಮವಾಗುವುದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಜಾವಳಿ ಎಂಬಲ್ಲಿ.ಆರಂಭದಲ್ಲಿ ಸಣ್ಣ ಒರತೆಯಂತೆ ಆರಂಭವಾಗುವ ಹೇಮಾವತಿ, ಮುಂದೆ ಹಳ್ಳ–ಝರಿಗಳನ್ನು ದಾಟಿ ನದಿಯಾಗಿ ಹರಿಯುತ್ತಾಳೆ. ಮೂಡಿಗೆರೆ, ಸಕಲೇಶಪುರದ ಮಾರ್ಗವಾಗಿ ಹಾಸನ ಜಿಲ್ಲೆಯ ಗೊರೂರಿನ ಜಲಾಶಯವನ್ನು ಸೇರುತ್ತಾಳೆ. ಜಲಾಶಯದ ನಾಲೆಗಳ ಮೂಲಕ ಹಾಸನ, ತುಮಕೂರು ಮತ್ತು ಮಂಡ್ಯ ಜಿಲ್ಲೆಯ ಕೆಲ ಭಾಗಗಳಿಗೆ ನೀರುಣಿಸಲಾಗುತ್ತಿದೆ. ಈ ನದಿಯ ಉಗಮ ಸ್ಥಳವನ್ನು ಸರ್ಕಾರ ಇನ್ನಷ್ಟು ಅಭಿವೃದ್ಧಿಪಡಿಸಬೇಕು ಎಂಬುದು ಸ್ಥಳೀಯರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.