ಕೊಪ್ಪ: ಕೃಷಿಯನ್ನು ನೆಚ್ಚಿಕೊಂಡು ಬದುಕು ನಡೆಸುತ್ತಿರುವ ತಾಲ್ಲೂಕಿನ ಬಿಂತ್ರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲಮಕ್ಕಿ ನಿವಾಸಿ ಹೊನ್ನಮ್ಮ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು(ನರೇಗಾ) ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕೃಷಿ ಮತ್ತು ವೈಯಕ್ತಿಕ ಜೀವನದಲ್ಲಿ ಸುಧಾರಣೆ ಕಂಡುಕೊಂಡಿದ್ದಾರೆ.
ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳಾದ ಜಾನುವಾರು ಸಾಕಾಣಿಕಾ ಶೆಡ್ ನಿರ್ಮಾಣ, ಕೃಷಿ ಬಾವಿ ನಿರ್ಮಾಣ, ಅಡಿಕೆ ಮತ್ತು ಸಿಲ್ವರ್ ಗಿಡ ನಾಟಿಗೆ ನೆರವು ಪಡೆದುಕೊಂಡಿದ್ದಾರೆ. 2013-14ನೇ ಸಾಲಿನ ಬಸವ ವಸತಿ ಯೋಜನೆಯಡಿ ಮನೆಗೆ ಹೆಚ್ಚುವರಿ ಸಹಾಯಧನ ಹಾಗೂ ಕೋಳಿ ಸಾಕಾಣಿಕಾ ಶೆಡ್ ನಿರ್ಮಿಸಿಕೊಂಡಿದ್ದಾರೆ. 2018-19ನೇ ಸಾಲಿನ ಕೃಷಿ ಅರಣ್ಯ ಕಾಮಗಾರಿ ಹಾಗೂ ಬಚ್ಚಲು ನೀರಿಗೆ ಇಂಗುಗುಂಡಿ ಮಾಡಿಕೊಂಡಿದ್ದಾರೆ.
‘ನರೇಗಾ ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಒಬ್ಬ ಫಲಾನುಭವಿಗೆ ₹5 ಲಕ್ಷ ಮೊತ್ತದ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ದನದಕೊಟ್ಟಿಗೆ ನಿರ್ಮಾಣಕ್ಕೆ ₹57,000, ಕುರಿಶೆಡ್‌ಗೆ ₹70,000, ಎರೆಹುಳುತೊಟ್ಟಿಗೆ ₹20,000, ತೆರೆದಬಾವಿ ಮರು ನಿರ್ಮಾಣ ₹30,000, ಕೋಳಿಶೆಡ್ ₹60,000, ಬಚ್ಚಲು ಗುಂಡಿ ₹11,000, ಕೃಷಿ ಬಾವಿ ₹1.50 ಲಕ್ಷ ಸಹಾಯಧನ ನೀಡಲಾಗುತ್ತಿದೆ' ಎಂದು ತಾಲ್ಲೂಕು ಪಂಚಾಯಿತಿಯ ಮಾಹಿತಿ, ಶಿಕ್ಷಣ ಸಂಯೋಜಕಿ ಸುಮಲತಾ ಬಜಗೋಳಿ ಹೇಳಿದರು.
‘ನರೇಗಾ ಅಕ್ಷಯ ಪಾತ್ರೆ’ ‘ಆಗದು ಎಂದು ಸುಮ್ಮನೆ ಕುಳಿತರೆ ಜೀವನದಲ್ಲಿ ಯಾವ ಕೆಲಸವೂ ಆಗುವುದಿಲ್ಲ. ಶ್ರಮಪಟ್ಟರೆ ಪ್ರತಿಫಲ ಖಂಡಿತ ಸಿಗುತ್ತದೆ. ಇಂದು ನಾನು ನರೇಗಾ ಯೋಜನೆಯಡಿ ಮಾಡಿದ ಸಮಗ್ರ ಅಭಿವೃದ್ಧಿಗೆ ರಾಜ್ಯ ಮಟ್ಟದ ಪ್ರಶಂಸನಾ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆ ಇದೆ ಈ ಯೋಜನೆ ನನಗೆ ಅಕ್ಷಯ ಪಾತ್ರೆಯಾಗಿದೆ’ ಎಂದು ನರೇಗಾ ಯೋಜನೆ ಫಲಾನುಭವಿ ಹೊನ್ನಮ್ಮ ಹೇಳಿದರು.
ಹೊನ್ನಮ್ಮ ‘ನರೇಗಾ’ ಸದ್ಭಳಕೆ ಮೂಲಕ ಜನ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಜನರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕುಕೀರ್ತನಾ ಎಚ್.ಎಸ್. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯಿತಿ ಚಿಕ್ಕಮಗಳೂರು
ಗ್ರಾಮೀಣ ಕುಟುಂಬವೊಂದರ ಸರ್ವತೋಮುಖ ಅಭಿವೃದ್ಧಿಗೆ ನರೇಗಾದ ಕೊಡುಗೆ ಮಹತ್ವದ್ದು.ಹೊನ್ನಮ್ಮ ಅವರು ಇತರೆ ಕುಟುಂಬಗಳಿಗೂ ಪ್ರೇರಣೆಚೇತನ್ ಕೆ.ಜಿ. ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯಿತಿ ಕೊಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.