ADVERTISEMENT

ಕೊಪ್ಪ: ಅಕ್ರಮವಾಗಿ ಮರಳು ಸಂಗ್ರಹ; ಪೊಲೀಸರಿಂದ ದಾಳಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 6:38 IST
Last Updated 5 ಜನವರಿ 2026, 6:38 IST
ಕೊಪ್ಪ ತಾಲ್ಲೂಕಿನ ಬಿಳಗಾರೆ ವೆಂಕಟೇಶ್ ಎಂಬವವರ ಮನೆ ಬಳಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳು
ಕೊಪ್ಪ ತಾಲ್ಲೂಕಿನ ಬಿಳಗಾರೆ ವೆಂಕಟೇಶ್ ಎಂಬವವರ ಮನೆ ಬಳಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳು   

ಕೊಪ್ಪ: ಬೊಮ್ಮಲಾಪುರ ಸಮೀಪದ ಬಿಳಗಾರೆ ಎಂಬಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಲಾಗಿದೆ ಎಂಬ ಮಾಹಿತಿ ಆಧರಿಸಿ, ಹರಿಹರಪುರ ಠಾಣೆ ಪೊಲೀಸರು ಭಾನುವಾರ ಬೆಳಿಗ್ಗೆ ದಾಳಿ ನಡೆಸಿದ್ದರು.

ಪೊಲೀಸರು, ದಾಳಿ ನಡೆಸಿದ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು. ತುಂಗಾ ನದಿಯಿಂದ ಮರಳು ಅಕ್ರಮವಾಗಿ ತೆಗೆದು ಬಿಳಗಾರೆ ವೆಂಕಟೇಶ್ ಎಂಬುವರ ಮನೆ ಬಳಿ ಸಂಗ್ರಹಿಸಿ, ಬೇಡಿಕೆ ಇದ್ದ ಕಡೆಗೆ ರಾತ್ರಿ ವೇಳೆ ಪೂರೈಕೆ ಮಾಡಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.

ಕಗ್ಗಾ ನಿವಾಸಿ ಜೀವನ್ ಎಂಬುವರು ಮನೆ ಆವರಣದಲ್ಲಿ ಮರಳು ಸಂಗ್ರಹಿಸಿರುವುದಾಗಿ ವೆಂಕಟೇಶ್ ಅವರು, ಪೊಲೀಸರು ದಾಳಿ ನಡೆಸಿದ್ದ ವೇಳೆ ತಿಳಿಸಿದರು. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಕೃಷ್ಣನಾಯ್ಕ್, ಪುನೀತ್, ಪ್ರಶಾಂತ್, ಅಂಕಿತ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.