ADVERTISEMENT

ಕಳಸದಲ್ಲಿ ಜೈನ ಕನ್ನಡ ಸಾಹಿತ್ಯ ಸಮ್ಮೇಳನ ಮೇ 18ಕ್ಕೆ

​ಪ್ರಜಾವಾಣಿ ವಾರ್ತೆ
Published 3 ಮೇ 2025, 14:28 IST
Last Updated 3 ಮೇ 2025, 14:28 IST
ಶ್ರೀವರ್ಮ ಹೆಗ್ಗಡೆ
ಶ್ರೀವರ್ಮ ಹೆಗ್ಗಡೆ   

ಕಳಸ: ಇಲ್ಲಿನ ಚಂದ್ರನಾಥ ಬಸದಿ ಪಂಚಕಲ್ಯಾಣದ ಮೊದಲ ದಿನವಾದ ಮೇ 18ರಂದು ರಾಜ್ಯ ಮಟ್ಟದ ಮೊದಲ ಜೈನ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಚಂದ್ರನಾಥ ಬಸದಿ ಜೀಣೋದ್ಧಾರ ಸಮಿತಿ ಆಶ್ರಯದಲ್ಲಿ ಸಮ್ಮೇಳನ ನಡೆಯುತ್ತಿದೆ. ಭೈರವರಸ ವೇದಿಕೆಯಲ್ಲಿ ನಡೆಯುವ ಸಮ್ಮೇಳನದ ಅಧ್ಯಕ್ಷರಾಗಿ ಹೊರನಾಡು ದೊಡ್ಡಮನೆ ಮನೆತನದ ಡಿ. ಶ್ರೀವರ್ಮ ಹೆಗ್ಗಡೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.

ಸಾಹಿತಿ, ವಿದ್ವಾಂಸರಾದ ಶ್ರೀವರ್ಮ ಹೆಗ್ಗಡೆ, ಬಾಲ್ಯದಿಂದಲೇ ವಾಕ್ಪಟುವಾಗಿದ್ದವರು. ಪೆರಿಯಾರ್ ಸಂಪರ್ಕ ಹೊಂದಿದ್ದ ಅವರು ವೈಚಾರಿಕ ಬರವಣಿಗೆಯಲ್ಲಿ ತೊಡಗಿಕೊಂಡವರು. ತೀರ್ಥಂಕರ ಮಹಾವೀರ, ಧರ್ಮಚಕ್ರ ಶ್ರೀವಿಹಾರ, ಸಮಾಧಿ ಮರಣ ಮತ್ತಿತರ ಕೃತಿ ರಚನೆ ಮಾಡಿರುವ ಅವರಿಗೆ 1991ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯವು ಡಿಲಿಟ್ ಪದವಿ ನೀಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.