ಕಳಸ: ರಾಜ್ಯಮಟ್ಟದ ಪ್ರಥಮ ಜೈನ ಸಾಹಿತ್ಯ ಸಮ್ಮೇಳನ ಮೇ 18ರಂದು ಕಳಸದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಕಳಸದ ಕೆಳಂಗಡಿಯ ಶ್ರೀಚಂದ್ರನಾಥ ಸ್ವಾಮಿ ಬಸದಿಯ ಪಂಚಕಲ್ಯಾಣ ಮೇ 18ರಿಂದ 22ರವರೆಗೆ ನಡೆಯಲಿದ್ದು, ಪ್ರಥಮ ದಿನ (ಮೇ 18) ಕನ್ನಡ ಸಾಹಿತ್ಯ ಪರಿಷತ್ ಮತ್ತು ಶ್ರೀಚಂದ್ರನಾಥ ಸ್ವಾಮಿ ಬಸದಿ ಜೀರ್ಣೋದ್ಧಾರ ಸಮಿತಿ ಆಶ್ರಯದಲ್ಲಿ ನಡೆಯುವ ಸಮ್ಮೇಳನದ ಅಧ್ಯಕ್ಷರಾಗಿ ಡಿ.ಶ್ರೀವರ್ಮ ಹೆಗ್ಗಡೆ ಆಯ್ಕೆಯಾಗಿದ್ದಾರೆ ಎಂದರು.
ಸಮ್ಮೇಳನದಲ್ಲಿ ಜೈನ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಡಾ.ಪದ್ಮಿನಿ ನಾಗರಾಜ್, ದೇವೇಂದ್ರಪ್ಪ ಅಕ್ಕಿ ಮತ್ತು ಡಾ.ಅಪ್ಪಣ್ಣ ಹಂಜೆ ಅವರಿಗೆ ‘ಸಾಹಿತ್ಯ ಸಿರಿ ಪ್ರಶಸ್ತಿ’ ನೀಡಲಾಗುವುದು ಎಂದು ತಿಳಿಸಿದರು.
ಡಾ.ಪದ್ಮನಿ ನಾಗರಾಜು ಅವರು, ಲೇಖಕಿ ಮತ್ತು ಬೆಂಗಳೂರಿನಲ್ಲಿ ಪ್ರಾಧ್ಯಾಪಕಿ ಆಗಿದ್ದಾರೆ. ಹುಲಕೋಟಿಯ ಡಾ.ಅಪ್ಪಣ್ಣ ಹಂಜೆ ಅವರು, ಜೈನ ಇತಿಹಾಸ ಸಂಶೋಧಕ ಮತ್ತು ಇತಿಹಾಸ ಪ್ರಾಧ್ಯಾಪಕರಾಗಿದ್ದಾರೆ. ಇಂಡಿಯಲ್ಲಿ ನೆಲೆಸಿರುವ ದೇವೇಂದ್ರಪ್ಪ ಅಕ್ಕಿ ಅವರು, ನಿವೃತ್ತ ಶಿಕ್ಷಕರೂ ಹಾಗೂ ಇತಿಹಾಸ ಸಂಶೋಧಕರೂ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.