ADVERTISEMENT

ಬೆಂಗಳೂರು ಕೃಷಿ ಮೇಳದಲ್ಲಿನಸಿರಿ ಜೇನಿನ ಪರಿಮಳ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 4:52 IST
Last Updated 6 ನವೆಂಬರ್ 2022, 4:52 IST
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಕಳಸದ ಜೇನು ಕೃಷಿ ತಜ್ಞ ಚಂದ್ರಶೇಖರ್ ಮಳಿಗೆ ತೆರೆದಿರುವುದು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಿತ್ತಲಮಕ್ಕಿ ರಾಜೇಂದ್ರ ಇದ್ದರು.
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಕಳಸದ ಜೇನು ಕೃಷಿ ತಜ್ಞ ಚಂದ್ರಶೇಖರ್ ಮಳಿಗೆ ತೆರೆದಿರುವುದು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಿತ್ತಲಮಕ್ಕಿ ರಾಜೇಂದ್ರ ಇದ್ದರು.   

ಕಳಸ: ಇಲ್ಲಿನ ಹಳುವಳ್ಳಿ ಸಮೀಪದ ವಲ್ಲಿಕುಡಿಗೆಯ ಜೇನು ಕೃಷಿ ತಜ್ಞ ಚಂದ್ರಶೇಖರ್ ಬೆಂಗಳೂರಿನಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಭಾಗವಹಿಸಿ ‘ನಸಿರಿ’ ಜೇನಿನ ಮಹತ್ವದ ಬಗ್ಗೆ ಆಸಕ್ತರಿಗೆ ಮಾಹಿತಿ ನೀಡಿದರು.

‘ಚುಚ್ಚದ ಜೇನು’ ಎಂದೇ ಹೆಸರಾದ ನಸಿರಿ ಜೇನನ್ನು ಹೇಗೆ ಸಲಹಬೇಕು ಎಂಬ ತಂತ್ರಗಳನ್ನು ಮತ್ತು ಅದರ ತುಪ್ಪಕ್ಕೆ ಇರುವ ಭಾರಿ ಬೇಡಿಕೆ ಬಗ್ಗೆಯೂ ಚಂದ್ರಶೇಖರ್ ಮಾಹಿತಿ ನೀಡಿದರು.

ಮೇಳದಲ್ಲಿ ಅನೇಕ ಕೃಷಿಕರು ಆಸಕ್ತಿಯಿಂದ ಚಂದ್ರಶೇಖರ್ ಅವರಿಂದ ಜೇನು ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ತಾವೇ ರಚಿಸಿದ ಅನೇಕ ಬಗೆಯ ಜೇನುಗೂಡುಗಳ ಮಾದರಿಗಳನ್ನು ಕೂಡ ಚಂದ್ರಶೇಖರ್ ಅಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.