
ಪ್ರಜಾವಾಣಿ ವಾರ್ತೆ
ಕಳಸ: ತಾಲ್ಲೂಕಿನಾದ್ಯಂತ ಮಂಗಳವಾರ ಸಂಜೆ ಅಕಾಲಿಕ ಮಳೆ ಸುರಿದು ಕೃಷಿಕ ವಲಯದಲ್ಲಿ ಚಿಂತೆ ಮೂಡಿಸಿದೆ.
ಮಂಗಳವಾರ ಸಂಜೆ 4ರ ವೇಳೆಗೆ ಸಣ್ಣಗೆ ಆರಂಭವಾದ ಮಳೆ ಆನಂತರ ಜೋರಾಗಿ ಸುರಿಯಿತು.
ಕಾಫಿ ಕಣದಲ್ಲಿ ಇದ್ದ ಕಾಫಿ ಫಸಲನ್ನು ರಾಶಿ ಮಾಡುವ ಹೊತ್ತಿಗೆ ಮಳೆ ಸುರಿದು ಫಸಲನ್ನು ನೆನೆಸಿತು. ಕಳಸ ಆಸುಪಾಸಿನಲ್ಲಿ 10 ಮಿ.ಮೀ ಮಳೆ ಆಗಿದ್ದರೆ, ಹಿರೇಬೈಲು ಆಸುಪಾಸಿನಲ್ಲಿ 30 ಮಿ.ಮೀ ಮಳೆ ಸುರಿದಿದೆ.
ಕಾಫಿ ಹಣ್ಣಿನ ಕೊಯ್ಲು ಆರಂಭವಾಗಿರುವ ಈ ಹಂತದಲ್ಲಿ ಸುರಿದ ಮಳೆಯು ಮುಂದಿನ ವಾರ ಕಾಫಿ ಗಿಡದಲ್ಲಿ ಹೂವು ಅರಳಿಸಲಿದೆ. ಮುಂದಿನ ಮೂರು ದಿನದ ನಂತರ ಕಾಫಿ ಕೊಯ್ಲನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಬೆಳೆಗಾರರಿಗೆ ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.