ADVERTISEMENT

ಕನ್ನಡದಲ್ಲಿ ಹೊಸಪರ್ವ ಸೃಷ್ಟಿಸಿದ ಕುವೆಂಪು

ಆಲ್ದೂರು: ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದಿಂದ ನುಡಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 6:31 IST
Last Updated 13 ನವೆಂಬರ್ 2022, 6:31 IST
ದೊಡ್ಡಮಾಗರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನುಡಿ ಮಹೋತ್ಸವ ಕಾರ್ಯಕ್ರಮ ನಡೆಯಿತು.
ದೊಡ್ಡಮಾಗರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನುಡಿ ಮಹೋತ್ಸವ ಕಾರ್ಯಕ್ರಮ ನಡೆಯಿತು.   

ಆಲ್ದೂರು: ಸಮೀಪದ ದೊಡ್ಡಮಾಗರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ವತಿಯಿಂದ ನುಡಿ ಮಹೋತ್ಸವ ಕಾರ್ಯಕ್ರಮ ಶನಿವಾರ ನಡೆಯಿತು.

ಕಸಾಪ ಹೋಬಳಿ ಘಟಕದ ಅಧ್ಯಕ್ಷ ನೂರ್ ಮಹಮ್ಮದ್ ಮಾತನಾಡಿ, ‘ಆಲ್ದೂರಿನಲ್ಲಿ ಸಾಹಿತ್ಯ ಪರಿಷತ್ತು ಬೆಳೆದು ಬರುತ್ತಿದ್ದು, ಎಲ್ಲರೂ ಸಹಕಾರವನ್ನು ನೀಡಬೇಕು’ ಎಂದರು.

ಸಾಹಿತ್ಯ ಪರಿಷತ್ ಸದಸ್ಯ ನವರಾಜು ಎಚ್ ಮಾತನಾಡಿ, 3 ಸಾವಿರ ವರ್ಷಗಳ ಇತಿಹಾಸವನ್ನು ಕನ್ನಡ ಭಾಷೆ ಹೊಂದಿದೆ. ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಮೂಲಕ ಭಾಷಾ ಬೆಳವಣಿಗೆಯನ್ನು ಗುರುತಿಸಿದ್ದಾರೆ. ಕುವೆಂಪು ಕನ್ನಡದ ಸಿರಿವಂತಿಕೆ ಹೆಚ್ಚಿಸಿದ್ದಾರೆ. ಚಾತುರ್ವರ್ಣ ವ್ಯವಸ್ಥೆಯನ್ನು ಹೊಂದಿದ್ದ ಕನ್ನಡಸಾಹಿತ್ಯದಲ್ಲಿ ಶೂದ್ರ ತಪಸ್ವಿ, ಬೆರಳಿಗೆ ಕೊರಳ್, ಜಲಗಾರ ಕೃತಿಗಳ ಮೂಲಕ ಕುವೆಂಪು ಹೊಸ ಪರ್ವವನ್ನೇ ಉದಯಿಸುವಂತೆ ಮಾಡಿದರು ಎಂದರು.

ADVERTISEMENT

ಸಾಹಿತ್ಯ ಪರಿಷತ್‌ ಪದಾಧಿಕಾರಿಗಳಾದ ಗೋಪಾಲಗೌಡ, ಅಣ್ಣೇಗೌಡ, ಎಚ್.ಎಸ್. ರವಿ, ರಮೇಶ್ ಹಾಂದಿ, ಪ್ರಕಾಶ್, ಗ್ರಂಥಪಾಲಕ ಕೆಂಚಯ್ಯ, ಶಿಕ್ಷಕ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.