ADVERTISEMENT

ತರೀಕೆರೆ: ಮಮತಾ ಮಹಿಳಾ ಸಮಾಜದಿಂದ ಕನ್ನಡ ರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2024, 14:33 IST
Last Updated 30 ನವೆಂಬರ್ 2024, 14:33 IST
ತರೀಕೆರೆ ಮಮತಾ ಮಹಿಳಾ ಸಮಾಜದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ತರೀಕೆರೆ ಮಮತಾ ಮಹಿಳಾ ಸಮಾಜದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.   

ತರೀಕೆರೆ: ಆಟೊ ಚಾಲಕರು, ಹೋಟೆಲ್ ಕಾರ್ಮಿಕರು, ಮಾಧ್ಯಮ ಮತ್ತಿತರರಿಂದ ಕನ್ನಡ ಉಳಿದಿದೆ ಎಂದು ಸಾಹಿತಿ ಎಚ್.ಎಸ್.ಸುರೇಶ್‍ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ಮಮತಾ ಮಹಿಳಾ ಸಮಾಜ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ ಮಕ್ಕಳು ಸಣ್ಣವರಿರುವಾಗಲೇ ಹಂತದಲ್ಲಿಯೇ ಕನ್ನಡದ ಆಸಕ್ತಿ ಮೂಡಿಸಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಸಮಾಜ ಸೇವಕ ಟಿ.ಜಿ. ಮಂಜುನಾಥ್ ಮಾತನಾಡಿ ನಿರ್ಗತಿಕರ, ರೋಗಿಗಳ ಸೇವೆಯಲ್ಲಿ ಮಹಿಳಾ ಸಮಾಜ ಕೈಜೋಡಿಸಬೇಕು ಎಂದರು.

ADVERTISEMENT

ಮಹಿಳಾ ಸಮಾಜದ ಅಧ್ಯಕ್ಷೆ ಮಂಜುಳಾ ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ಉಳಿವು ಎಂಬ ಕಿರು ನಾಟಕವನ್ನು ಸಮಿತಿ ಸದಸ್ಯರಿಂದ ಪ್ರದರ್ಶಿಸಿದರು. ಕವಿತಾ ಉಮೇಶ್‍ ಸ್ವಾಗತಿದರು. ಕಾರ್ಯದರ್ಶಿ ಲತಾ ಶ್ರೀನಿವಾಸ್ ನಿರೂಪಿಸಿದರು. ಭಾಗ್ಯಾ ರೇವಣ್ಣ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.