ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಮಂಗಳವಾರ ದಿನವಿಡಿ ಜಿಟಿಜಿಟಿ ಮಳೆ ಸುರಿಯಿತು. ಚಿಕ್ಕಮಗಳೂರು, ತರೀಕೆರೆ ಸುತ್ತಮುತ್ತ ಜೋರು ಮಳೆಯಾಗಿದ್ದು, ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕಿನಲ್ಲಿ ಸಣ್ಣದಾಗಿ ಮಳೆ ಸುರಿಯಿತು.
ನಿರಂತರ ಮಳೆಯಿಂದ ಚಿಕ್ಕಮಗಳೂರು ನಗರದ ಮೀನು ಮಾರುಕಟ್ಟೆಗೆ ನೀರು ನುಗ್ಗಿದ್ದು, ಹಲವು ರಸ್ತೆಗಳ ಜಲಾವೃತವಾಗಿದ್ದವು. ಕಡೂರು, ತರೀಕೆರೆ ಭಾಗದಲ್ಲಿ ಅಡಿಕೆ ಕೊಯ್ಲು ಆರಂಭವಾಗಿದ್ದು, ಮೂರು ದಿನಗಳಿಂದ ಮಳೆ ಸುರಿಯುತ್ತಿರುದು ಕೊಯ್ಲಿಗೆ ತೊಂದರೆಯಾಗಿದೆ. ಮೆಕ್ಕೆಜೋಳ ಕೂಡ ಕೊಯ್ಲು ಆರಂಭವಾಗಿದ್ದು, ಈಗಾಗಲೇ ಕೊಯ್ಲಾಗಿರುವ ಜೋಳ ಒಣಗಿಸಲು ಸಾಧ್ಯವಾಗದೆ ರೈತರು ಪರದಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.