ಕಳಸ: ತಾಲ್ಲೂಕಿನಾದ್ಯಂತ ಆರಿದ್ರಾ ಮಳೆಯು ಧಾರಾಕಾರವಾಗಿ ಸುರಿಯುತ್ತಿದೆ. ಸೋಮವಾರದಿಂದ ಮಂಗಳವಾರ ಬೆಳಿಗ್ಗೆವರೆಗೆ 61 ಮಿ.ಮೀ ಮಳೆ ಆಗಿದೆ.
ಸುರುಮಳೆಯಿಂದಾಗಿ ಎಲ್ಲ ಹಳ್ಳಗಳೂ ತುಂಬಿ ಹರಿಯುತ್ತಿದ್ದು, ಚಳಿಯ ವಾತಾವರಣ ಸೃಷ್ಟಿಯಾಗಿದೆ. ಭದ್ರಾ ನದಿ ಒಡಲು ತುಂಬುತ್ತಿದ್ದು ವರ್ಷದ ಗರಿಷ್ಟ ಮಟ್ಟ ತಲುಪಿದೆ. ತೋಟಗಳಲ್ಲಿ ಕಾರ್ಮಿಕರು ಮಳೆಗೆ ಹೆದರಿ ರಜೆ ಪಡೆದಿದ್ದಾರೆ. ಶಾಲಾ ಮಕ್ಕಳು ಮಳೆಯಲ್ಲೆ ತೋಯ್ದುಕೊಂಡು ಹೋದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.