ADVERTISEMENT

ಕೊಪ್ಪ: ಕನ್ನಡ ಸಾಹಿತ್ಯ ಪರಿಷತ್‌ ಪದಗ್ರಹಣ, ಭಜನಾ ಸ್ಪರ್ಧೆ 10ರಂದು

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 16:25 IST
Last Updated 1 ಜುಲೈ 2022, 16:25 IST
ರತ್ನಾಕರ್
ರತ್ನಾಕರ್   

ಕೊಪ್ಪ: ಕನ್ನಡ ಜಾನಪದ ಪರಿಷತ್ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಹಾಗೂ ತಾಲ್ಲೂಕು ಮಟ್ಟದ ಭಜನಾ ಮತ್ತು ಸಮೂಹ ಜಾನಪದ ಗೀತೆ ಸ್ಪರ್ಧಾ ಕಾರ್ಯಕ್ರಮವನ್ನು ಪುರಭವನದಲ್ಲಿ ಜುಲೈ 10ರಂದು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಕನ್ನಡ ಜಾನಪದ ಪರಿಷತ್ ನಿಯೋಜಿತ ಅಧ್ಯಕ್ಷ ಓಣಿತೋಟ ರತ್ನಾಕರ್ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪರಿಷತ್‌ನ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್.ಜಾನಪದ ಬಾಲಾಜಿ ಉದ್ಘಾಟಿಸುವರು. ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಅಧ್ಯಕ್ಷತೆ ವಹಿಸುವರು. ಶಾಸಕ ಟಿ.ಡಿ.ರಾಜೇಗೌಡ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಅಮ್ಮ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಭಾಗವಹಿಸುವರು ಎಂದು ತಿಳಿಸಿದರು.

‘ಭಜನಾ ಸ್ಪರ್ಧೆ ತಂಡದಲ್ಲಿ 8 ರಿಂದ 10ಜನ ಇರಬೇಕು. ಕಾಲಾವಕಾಶ 6 ನಿಮಿಷ ಇರಲಿದೆ. ಜಾನಪದ ಗೀತೆಗಳ ಸಮೂಹ ಸ್ಪರ್ಧೆ ತಂಡದಲ್ಲಿ ಗರಿಷ್ಟ 6 ಜನರಿರಬೇಕು. ಹಲಗೆ, ಕೊಂಬು, ಕಂಚರ, ತಮ್ಮಡಿ ಮೊದಲಾದ ಜಾನಪದ ಪರಿಕರ ಬಳಕೆ ಮಾಡಬಹುದು. ಸ್ಪರ್ಧಿಗಳು ಅಂದು ಬೆಳಿಗ್ಗೆ 10 ಗಂಟೆಗೆ ಹಾಜರಿರಬೇಕು. ಮಾಹಿತಿಗೆ ಬಿ.ಆರ್.ಗಣೇಶ್ ಬಲಗಾರು (8277146941), ಸುಮಿತ್ರಾ ನಾರಾಯಣ್ (7676934030) ಅವ ರನ್ನು ಸಂಪರ್ಕಿಸಬಹುದು’ ಎಂದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷೆ ಎಸ್.ಎನ್.ಚಂದ್ರಕಲಾ, ಜಾನಪದ ಪರಿಷತ್‌ತಾಲ್ಲೂಕು ಘಟಕದ ಗೌರವಾಧ್ಯಕ್ಷ ಎಲ್.ಎಂ.ಪ್ರಕಾಶ್ ಕೌರಿ, ಉಪಾಧ್ಯಕ್ಷರಾದ ಕಿರುನಾರ್ವೆ ಚಂದ್ರಶೇಖರ್, ಎಸ್.ಸಿ. ಪ್ರದೀಪ್, ಗೌರವ ಸಲಹೆಗಾರ ಎಚ್.ಎಂ.ರವಿಕಾಂತ್, ಪ್ರಧಾನ ಕಾರ್ಯದರ್ಶಿ ಗಳಾದ ಜಿನೇಶ್ ಇರ್ವತ್ತೂರ್, ಅಶೋಕ್ ನಾರ್ವೆ, ಸಂಘಟನಾ ಕಾರ್ಯದರ್ಶಿಗಳಾದ ಗಣೇಶ್ ಬಲಗಾರು, ಮೈತ್ರಾ ಗಣೇಶ್, ಕಸಬಾ ಹೋಬಳಿ ಅಧ್ಯಕ್ಷ ಎಚ್.ಕೆ.ಪ್ರಶಾಂತ್, ಸಂಚಾಲಕ ಎ.ಆರ್.ದೇವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.