ADVERTISEMENT

ಕೊಟ್ಟಿಗೆಹಾರ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಪುಸ್ತಕ ಪರಿಷೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2024, 14:09 IST
Last Updated 5 ಡಿಸೆಂಬರ್ 2024, 14:09 IST
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ   

ಕೊಟ್ಟಿಗೆಹಾರ (ಚಿಕ್ಕಮಗಳೂರು): ಇಲ್ಲಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಡಿ.7ರಂದು ಪುಸ್ತಕ ಪರಿಷೆ ನಡೆಯಲಿದೆ.

ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಪುಸ್ತಕ ಪ್ರಕಟಣೆ ಸವಾಲು;ಸಾಧ್ಯತೆಗಳ ಕುರಿತು ಸಂವಾದ ನಡೆಯಲಿದೆ. ರಾಜ್ಯದ ವಿವಿಧೆಡೆಯಿಂದ ಪ್ರಕಾಶಕರು, ಲೇಖಕರು ಭಾಗವಹಿಸುವರು. 

ಸಂವಾದದಲ್ಲಿ ಪ್ರಕಾಶಕ ಆರ್.ಜಿ.ನಾಗರಾಜ್, ಹರಿವು ಬುಕ್ಸ್‌ನ ಪ್ರಕಾಶಕ ಬಿ.ಆರ್.ರತೀಶ್, ಮಿಂಚುಳ್ಳಿ ಪ್ರಕಾಶನದ ಸೂರ್ಯಕೀರ್ತಿ, ಅಕ್ಷಯ್ ಬಾಳೆಗೆರೆ, ವಿಕಾಸ್ ನೇಗಿಲೋಣಿ , ಕುನಾಲ್ ಕನ್ನಡಿಗ ಮತ್ತಿತರರು ಭಾಗವಹಿಸುವರು. ಬರಹದ ಆಶಯ, ಹೊಸ ತಲೆಮಾರಿನ ಸಾಹಿತ್ಯಿಕ ಜವಾಬ್ದಾರಿಗಳು ಕುರಿತ ಸಂವಾದದಲ್ಲಿ ವಿಮರ್ಶಕ ಎಚ್.ಎಸ್.ಸತ್ಯನಾರಾಯಣ, ಕವಯತ್ರಿ ಭಾಗ್ಯಜ್ಯೋತಿ ಹಿರೇಮಠ, ಜಯರಾಮಾಚಾರಿ ಭಾಗವಹಿಸುವರು.

ADVERTISEMENT

ಪುಸ್ತಕ ಪರಿಷೆಯಲ್ಲಿ ಭಾಗವಹಿಸಲು 100 ಲೇಖಕರಿಗೆ ಮಾತ್ರ ಅವಕಾಶ. ₹500 ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬೇಕು. ಮಾಹಿತಿಗೆ ಮೊ. 8277589859/ 9663098873 ಸಂಪರ್ಕಿಸಬಹುದು. ಪುಸ್ತಕ ಪರಿಷೆ ಅಂಗವಾಗಿ ಡಿ.8ರಂದು ದೇವರಮನೆಗೆ ಚಾರಣ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.