ಕಡೂರು (ಚಿಕ್ಕಮಗಳೂರು): ತಾಲ್ಲೂಕಿನ ಸಖರಾಯಪಟ್ಟಣ ಸಮೀಪದ ಎಮ್ಮೆದೊಡ್ಡಿ ಗ್ರಾಮದ ಮದಗದ ಕೆರೆ ಸಮೀಪ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರ ಮೇಲೆ ಚಿರತೆ ದಾಳಿ ನಡೆಸಿದೆ.
ಹೊಸ ಸಿದ್ಧರಹಳ್ಳಿಯ ಮಂಜಪ್ಪ(56) ಮತ್ತು ಹಳೇ ಸಿದ್ಧರಹಳ್ಳಿಯ ಮೂರ್ತಪ್ಪ(55) ಗಾಯಗೊಂಡವರು. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಖರಾಯಪಟ್ಟಣಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದಾ ಚಿರತೆ ಅವರ ಮೇಲೆ ಎರಗಿದೆ. ಮೂರ್ತಣ್ಣ ಅವರ ತಲೆ, ಕೈಗಳಿಗೆ ಮತ್ತು ಮಂಜಪ್ಪ ಅವರ ಎಡಗೈಗೆ ಪೆಟ್ಟಾಗಿದೆ. ಸಮೀಪ ಇದ್ದವರು ಓಡಿ ಬಂದು ಕೂಗಾಡಿ ಇಬ್ಬರನ್ನು ರಕ್ಷಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ನೂರಾರು ಜನ ಕಲ್ಲಿನಿಂದ ಹೊಡೆದು ಚಿರತೆಯನ್ನು ಅಟ್ಟಾಡಿಸಿದರು.
‘ಎಮ್ಮೆದೊಡ್ಡಿ ಗ್ರಾಮದ ಸುತ್ತಮುತ್ತಲ ಅರಣ್ಯದಲ್ಲಿ ಚಿರತೆಗಳಿದ್ದು, ರಸ್ತೆಯಲ್ಲಿ ಸಾಗುವವರ ಮೇಲೆ ದಾಳಿ ನಡೆಸುತ್ತಿವೆ. ಚಿರತೆಗಳನ್ನು ಹಿಡಿದು ಸ್ಥಳಾಂತರ ಮಾಡಬೇಕು’ ಎಂದು ಸ್ಥಳೀಯರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.