
ಅಜ್ಜಂಪುರ: ಸಮೀಪದ ಅಂತರಘಟ್ಟೆ ಗ್ರಾಮದ ದುರ್ಗಾಂಬ ದೇವಿ ಜಾತ್ರಾ ಮಹೋತ್ಸವದಲ್ಲಿ ಸೇರುವ ರಾಸುಗಳಿಗೆ ಪ್ರಥಮ ಚಿಕಿತ್ಸೆ ಮತ್ತು ಭಕ್ತರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಗೆ ಲಯನ್ಸ್ ಕ್ಲಬ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎಂ. ಪ್ರಕಾಶ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಜಾತ್ರೆಗೆ ಸಾವಿರಾರು ಬಂಡಿಗಳು ಬರುತ್ತವೆ. ಲಕ್ಷಾಂತರ ಭಕ್ತರು ಸೇರುತ್ತಾರೆ. ರಾಸುಗಳು ಕೆಲವೊಮ್ಮೆ ಅನಾರೋಗ್ಯಕ್ಕೆ ಮತ್ತು ಅವಘಡಗಳಿಗೆ ತುತ್ತಾಗುತ್ತವೆ. ಇಂತಹ ರಾಸುಗಳಿಗೆ ಪಶುಸಂಗೋಪನಾ ಇಲಾಖೆ ಚಿಕಿತ್ಸೆ ನೀಡುತ್ತದೆ. ಕ್ಲಬ್ ವತಿಯಿಂದ ಕುಡಿಯುವ ನೀರು ಪೂರೈಸಲಾಗುತ್ತದೆ ಎಂದರು.
ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಶಶಿಧರ್, ಸಂಚಾರಿ ಪ್ರಥಮ ಚಿಕಿತ್ಸಾ ವಾಹನ ಸನ್ನದ್ಧ ಸ್ಥಿತಿಯಲ್ಲಿರುತ್ತದೆ. ಮಾಹಿತಿ ಬಂದೊಡನೆ, ಅಗತ್ಯವಿರುವ ರಾಸುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಶುಕ್ರವಾರ ಸುಮಾರು 50ಕ್ಕೂ ಹೆಚ್ಚು ರಾಸುಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಪಶು ಚಿಕಿತ್ಸಕ ಗಿರೀಶ್, ಜಯಶ್ರೀ, ರವಿ, ಪುಟ್ಟಸ್ವಾಮಿ, ಪ್ರಭು, ರಮೇಶ್ ರಾಸುಗಳಿಗೆ ಚಿಕಿತ್ಸೆ ನೀಡಿದರು.
ಲಯನ್ಸ್ ಕ್ಲಬ್ ಉಪಾಧ್ಯಕ್ಷ ಶಿವಮೂರ್ತಿ, ಸದಸ್ಯ ಎಂ.ಕೃಷ್ಣಮೂರ್ತಿ,. ಮಂಜು ಎಂ.ಹೊಸಹಳ್ಳಿ, ಸತೀಶ್, ಸುರೇಶ್, ವಿಶ್ವನಾಥ, ಸಿದ್ದೇಗೌಡ, ನಾಗಭೂಷಣ್, ವಿಜಯಕುಮಾರಿ, ಮಾಲತಿ, ಇಂದ್ರಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.